Freedom TV desk ;
BENGALURU: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ದಾಖಲೆ ಪುಟ್ಟಕ್ಕೆ ಸೇರಿದ್ದಾರೆ. ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರು ಒಂದೇ ದಿನದಲ್ಲಿ 65 ತೀರ್ಪುಗಳನ್ನು ಪ್ರಕಟಿಸಿದ್ದರು.
ಇದೀಗ ಅವರ ಸಾಲಿಗೆ ಕರ್ನಾಟಕದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಕೂಡ ಸೇರಿದ್ದಾರೆ ಕಾರಣ, ಅವರು ಬುಧವಾರ ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಬೆಂಗಳೂರಿನ ಪ್ರಧಾನ ಪೀಠದಲ್ಲಿ 25 ತೀರ್ಪುಗಳನ್ನು ಕಾಯ್ದಿರಿಸಿ, ಹಾಗೂ ಧಾರವಾಡ ಪೀಠದಲ್ಲಿ ಕೇಳಿ ಕಾಯ್ದಿರಿಸಿದ 25 ಪ್ರಕರಣಗಳ ತೀರ್ಪುಗಳನ್ನು ನೀಡಿದ್ದಾರೆ.
ಈ ವೇಳೆ ಎಂಎಲ್ಸಿ ಸೂರಜ್ ರೇವಣ್ಣ ಅವರ ಆಯ್ಕೆ ವಿರುದ್ಧದ ಅರ್ಜಿಗಳ ತೀರ್ಪುಗಳು ಮತ್ತು ಭಾರಿ ಸದ್ದು ಮಾಡಿದ ಲಂಚ ಆರೋಪದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವು ತೀರ್ಪುಗಳು ಕೂಡ ಇದರಲ್ಲಿ ಸೇರಿವೆ.
ಅದರ ನಡುವೆ ಧಾರವಾಡ ಪೀಠದ ಪ್ರಕರಣಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ತೀರ್ಪು ನೀಡಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸುವ ಮೂಲಕ ದಾಖಲೆ ಪಟ್ಟಿಗೆ ಸೇರಿದ್ದಾರೆ.