ಯಾಕೋ ಏನೋ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ರನ್ನು ವಿವಾದಗಳು ಬೆಂಬಿಡದೇ ಕಾಡುತ್ತಿವೆ. ಮನ್ಸೂರ್ ಆಲಿಖಾನ್-ತ್ರಿಶಾ ನಡುವಿನ ವಿವಾದ ಮುಗಿಯಿತು ಎಂದು ತ್ರಿಶಾ ಅಭಿಮಾನಿಗಳು ನಿಟ್ಟುಸಿರು ಬಿಡುವ ಹೊತ್ತಗೆ ಮತ್ತೊಂದು ವಿವಾದ ಸುತ್ತಿಕೊಂಡಿದೆ.
ಅಣ್ಣಾ ಡಿಎಂಕೆ ಬಹಿಷ್ಕೃತ ನಾಯಕ ಎವಿ ರಾಜು, ನಟಿ ತ್ರಿಶಾ ಬಗ್ಗೆ ಅಸಹ್ಯ ಮತ್ತು ಆಕ್ಷೇಪಾರ್ಹವಾದ ಆರೋಪ ಮಾಡಿದ್ದಾರೆ.
ಈ ಹಿಂದೆ ಗೌವತ್ತೂರಿನಲ್ಲಿ ಒಂದು ಕಾರ್ಯಕ್ರಮಕ್ಕೆ ತ್ರಿಶಾ ಬಂದಿದ್ರು. ಆಗ ತ್ರಿಶಾ ಮೇಲೆ ಸ್ಥಳೀಯ ಎಂಎಲ್ಎ ಕಣ್ಣುಬಿದ್ದಿತ್ತು. 25 ಲಕ್ಷ ಕೊಟ್ಟು ಆಕೆ ಜೊತೆ ಒಂದು ರಾತ್ರಿ ಕಳೆದಿದ್ದ. ಇದಕ್ಕೆ ನಾನೇ ಸಾಕ್ಷಿ
ಎಂದು ಎವಿ ರಾಜು ಹೇಳಿಕೆ ನೀಡಿದ್ದಾರೆ.
ಇದನ್ನು ಕೇಳಿ ತ್ರಿಶಾ ಅಭಿಮಾನಿಗಳು ಗರಂ ಆಗಿದ್ದಾರೆ. ವಿಷಯ ತ್ರಿಶಾರನ್ನು ತಲುಪಿದೆ. ಆಕೆ ಸೀರಿಯಸ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಾಲ್ವರ ಗಮನ ಸೆಳೆಯಲು ಕೆಲವರು ಎಷ್ಟು ನೀಚತನಕ್ಕಾದರೂ ಇಳಿಯುತ್ತಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಈ ವಿಚಾರವಾಗಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಇದಕ್ಕೆ ಸಂಬಂಧಿಸಿ ನಾನು ಇನ್ನೇನು ಹೇಳಲ್ಲ. ನಮ್ಮ ಲೀಗಲ್ ಟೀಂ ಪ್ರತಿಕ್ರಿಯೆ ನೀಡುತ್ತೆ
ಎಂದು ನಟಿ ತ್ರಿಶಾ ಸ್ಪಷ್ಟಪಡಿಸಿದ್ದಾರೆ.
ಟಾಲಿವುಡ್, ಕಾಲಿವುಡ್ನಲ್ಲಿ ಕಳೆದ 20 ವರ್ಷಗಳಿಂದ ಸ್ಟಾರ್ ಹಿರೋಯಿನ್ ಆಗಿ ಮುಂದುವರೆಯುತ್ತಿದ್ದಾರೆ.ಸೆಕೆಂಡ್ ಇನ್ನಿಂಗ್ಸ್ನಲ್ಲಿ ಆಕೆ ಮತ್ತಷ್ಟು ಬ್ಯುಸಿ ಆಗಿದ್ದಾರೆ. ವಿಜಯ್, ಚಿರಂಜೀವಿಯಂತಹ ಹೀರೋಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಆಕೆ ವಿರುದ್ಧ ಇಂತಹ ಆರೋಪಗಳು ಕೇಳಿ ಬಂದಿರೋದು ಚರ್ಚೆಗೆ ಗ್ರಾಸವಾಗಿದೆ.
ತ್ರಿಶಾಗೆ ಯಾವುದೇ ಪೊಲಿಟಿಕಲ್ ಹಿನ್ನೆಲೆ ಇಲ್ಲ.. ಆಕೆಯ ಹಿಂದೆ ಬಲವಾದ ಮತ್ತು ಪ್ರಭಾವಿ ವ್ಯಕ್ತಿಗಳು ಇಲ್ಲದ ಕಾರಣ ಕೆಲವರು ಬೇಕೆಂದೇ ತ್ರಿಶಾರನ್ನು ಟಾರ್ಗೆಟ್ ಮಾಡುತ್ತಿದ್ದಾರೆ..ತ್ರಿಶಾ ಹೆಸರಿಗೆ ಕಳಂಕ ತರಲು ಷಡ್ಯತ್ರ್ಯ ಮಾಡುತ್ತಿದ್ದಾರೆ
ಎಂದು ಆಕೆಯ ಅಭಿಮಾನಿಗಳು ನೋವು ಬೀಳುತ್ತಿದ್ದಾರೆ.