Tuesday, June 24, 2025
25.9 C
Bengaluru
Google search engine
LIVE
ಮನೆ#Exclusive Newsಬರೋಬ್ಬರಿ 42 ಸಿಕ್ಸ್​: IPL ಟೀಮ್​ಗಳ ವಿಶ್ವ ದಾಖಲೆ ಸರಿಗಟ್ಟಿದ CPL ತಂಡಗಳು

ಬರೋಬ್ಬರಿ 42 ಸಿಕ್ಸ್​: IPL ಟೀಮ್​ಗಳ ವಿಶ್ವ ದಾಖಲೆ ಸರಿಗಟ್ಟಿದ CPL ತಂಡಗಳು

CPL 2024: ಟಿ20 ಕ್ರಿಕೆಟ್​ ಪಂದ್ಯವೊಂದರಲ್ಲಿ ಮೂಡಿಬಂದ ಗರಿಷ್ಠ ಸಿಕ್ಸ್​ಗಳ ಸಂಖ್ಯೆ 42. ಇಂತಹದೊಂದು ವಿಶ್ವ ದಾಖಲೆಯನ್ನು ನಿರ್ಮಿಸಿದ್ದು ಐಪಿಎಲ್ ತಂಡಗಳಾದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್​. ಇದೀಗ ಈ ದಾಖಲೆಯನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್​ನ ಎರಡು ತಂಡಗಳು ಸರಿಗಟ್ಟಿದೆ.

ಒಂದೇ ಪಂದ್ಯದಲ್ಲಿ ಬರೋಬ್ಬರಿ 42 ಸಿಕ್ಸರ್​ಗಳು… ಐಪಿಎಲ್​ನಲ್ಲಿ ನಿರ್ಮಾಣವಾದ ವಿಶ್ವ ದಾಖಲೆಗೆ ಸರಿಸಮಾನವಾಗಿ ನಿಂತ ಸಿಪಿಎಲ್​ ತಂಡಗಳು. ಹೌದು, ಕೆರಿಬಿಯನ್ ಪ್ರೀಮಿಯರ್​ ಲೀಗ್​ನ 7ನೇ ಪಂದ್ಯದಲ್ಲಿ ಸಿಕ್ಸರ್​ಗಳ ಸುರಿಮಳೆಯಾಗಿದೆ. ಈ ಸಿಕ್ಸ್​ ಸುರಿಮಳೆಯೊಂದಿಗೆ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಸಿಪಿಎಲ್​ನ 7ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು. ಈ ಇನಿಂಗ್ಸ್​ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್​ಗಳ ಸಂಖ್ಯೆ 23.

ಇದಾದ ಬಳಿಕ 267 ರನ್​ಗಳ ಗುರಿಯನ್ನು ಬೆನ್ನತ್ತಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 18 ಓವರ್​ಗಳಲ್ಲಿ 226 ರನ್​ ಬಾರಿಸಿ ಆಲೌಟ್ ಆಯಿತು. ಈ ಚೇಸಿಂಗ್ ವೇಳೆ ಸಿಡಿದ ಒಟ್ಟು ಸಿಕ್ಸರ್​ಗಳ ಸಂಖ್ಯೆ 19.
ಈ ಸಿಕ್ಸರ್​ಗಳೊಂದಿಗೆ ಟಿ20 ಕ್ರಿಕೆಟ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸ್​ಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಸರಿಗಟ್ಟಿದೆ. ಅಲ್ಲದೆ ಸಿಪಿಎಲ್​ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments