Wednesday, January 28, 2026
20.3 C
Bengaluru
Google search engine
LIVE
ಮನೆ#Exclusive Newsಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಸಂಚರಿಸಲಿವೆ ಬಿಎಂಟಿಸಿಯ 320 ಎಲೆಕ್ಟ್ರಿಕ್ ಎಸಿ ಬಸ್ಸುಗಳು

ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಸಂಚರಿಸಲಿವೆ ಬಿಎಂಟಿಸಿಯ 320 ಎಲೆಕ್ಟ್ರಿಕ್ ಎಸಿ ಬಸ್ಸುಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜನವರಿಯಲ್ಲಿ 320 ಹೊಸ ಎಸಿ ವಿದ್ಯುತ್ ಬಸ್ಸುಗಳನ್ನು ನಗರದಲ್ಲಿ ಓಡಿಸಲಿದೆ. ಓಂ ಕಂಪನಿಯು ಈ ಬಸ್ಸುಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಒದಗಿಸಲಿದೆ. ಬಸ್ಸುಗಳ ಚಾಲಕರನ್ನು ಅಶೋಕ್ ಲೇಲ್ಯಾಂಡ್ ನೇಮಿಸಲಿದೆ ಮತ್ತು ನಿರ್ವಾಹಕರನ್ನು ಸರ್ಕಾರ ನೇಮಿಸಲಿದೆ. ಈ ಬಸ್ಸುಗಳು ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣದವರೆಗೆ ಸಂಚಾರ ಮಾಡಲಿವೆ, ಮತ್ತು ನಗರದ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಬೆಂಗಳೂರು, ನವೆಂಬರ್​ 30: ಹೊಸ ವರ್ಷಕ್ಕೆ ಜನವರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ 320 ಹೊಚ್ಚ ಹೊಸ ಬಸ್​ಗಳು (BUS) ನಗರದಲ್ಲಿ ಸಂಚಾರ ಮಾಡಲಿವೆ. 320 ಎಸಿ ಎಲೆಕ್ಟ್ರಿಕ್ ಬಸ್ಸುಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅನ್ನ ಅಶೋಕ್ ಲೇಲ್ಯಾಂಡ್ ಕಂಪನಿಯ ಪಾಲುದಾರ ಸಂಸ್ಥೆಯಾದ ಓಂ ಕಂಪನಿ ಪಡೆದುಕೊಂಡಿದೆ. ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ.

12 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 320 ಬಸ್ಸುಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ಕಿಮೀ 65 ರೂ.ನಿಂದ 80 ಪೈಸೆಯಂತೆ ಬಿಎಂಟಿಸಿ ಈ ಬಸ್​ಗಳಿಗೆ ಹಣ ನೀಡಲಿದೆ ಎಂದು ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಬಸ್​ಗಳಿಗೆ ಚಾಲಕರನ್ನು ಅಶೋಕ್ ಲೇಲ್ಯಾಂಡ್ ಕಂಪನಿ ನೇಮಕ ಮಾಡುತ್ತದೆ. ನಿರ್ವಾಹಕರನ್ನು ಸರ್ಕಾರ ನೇಮಕ ಮಾಡುತ್ತದೆ. ಡಿಸೆಂಬರ್ 15 ರ ನಂತರ ಟ್ರಯಲ್ ರನ್​ಗಾಗಿ ಬಸ್​​ಗಳು ಬೆಂಗಳೂರಿಗೆ ಬರಲಿವೆ. ಈ ಎಸಿ ಎಲೆಕ್ಟ್ರಿಕ್ ಬಸ್​ಗಳು ಮೆಜೆಸ್ಟಿಕ್​ನಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಸದ್ಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬಿಎಂಟಿಸಿಯ ವೋಲ್ವೋ ಬಸ್ಸುಗಳು ಸಂಚಾರ ಮಾಡುತ್ತಿದ್ದು, ಈಗಿರುವ ಎಲ್ಲ ವೋಲ್ವೋ ಬಸ್ಸುಗಳು ನಗರದ ಬೇರೆ ಬೇರೆ ಮಾರ್ಗದಲ್ಲಿ ಸಂಚಾರ ಮಾಡಲಿವೆ.

ಈಗಾಗಲೆ ಬಿಎಂಟಿಸಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾರ್ಮಲ್ ಎಲೆಕ್ಟ್ರಿಕ್ ಬಸ್ಸುಗಳು ಸಂಚಾರ ಮಾಡುತ್ತಿದ್ದು, ಈ 320 ಎಸಿ‌ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯಿಂದ ಬಿಎಂಟಿಸಿಯಲ್ಲಿ ಒಟ್ಟು ಎಲೆಕ್ಟ್ರಿಕ್ ಬಸ್​ಗಳ ಸಂಖ್ಯೆ 1320 ಕ್ಕೆ ಏರಿಕೆ ಆಗಲಿದೆ. ಎಲೆಕ್ಟ್ರಿಕ್ ಬಸ್​ನಲ್ಲಿ ತುಂಬಾ ಆರಾಮದಾಯಕವಾಗಿ ಸಂಚಾರ ಮಾಡಬಹುದು ಎಂದು ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.

ಒಟ್ಟಿನಲ್ಲಿ ನಗರದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಎಲೆಕ್ಟ್ರಿಕ್ ಬಸ್ ಗಳಿಂದ ವಾಯುಮಾಲಿನ್ಯ ಕಡಿಮೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments