ಫ್ರೀಡಂ ಟಿವಿ : ಈ ವಾರದ ಚಂದ್ರನ ಸಂಚಾರ ಮಖಾ ನಕ್ಷತ್ರದಿಂದ ಅನೂರಾಧ ನಕ್ಷತ್ರದವರೆಗೆ. 28/01/2024 ರಿಂದ 03/02/2024 ವಾರಭವಿಷ್ಯ : ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜನವರಿ 28ರಿಂದ ಫೆಬ್ರವರಿ 03ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.
ಮೇಷ ರಾಶಿಯ ವಾರ ಭವಿಷ್ಯ ಈ ವಾರದ ವಾರ ಫಲದಲ್ಲಿ ನಿಮಗೆ ಕಳೆದ ವಾರದಂತೆ ಈ ವಾರವೂ ಭಾಗ್ಯಸ್ಥಾನದಲ್ಲಿ ಮೂರು ಗ್ರಹಗಳು ಇದ್ದು ಭಾಗ್ಯಗಳನ್ನು ಹೆಚ್ಚಿಸುತ್ತದೆ. ಭಾಗ್ಯ ಎಂದರೆ ಶುಭ ಸಂಗತಿಗಳು ಜೀವನಕ್ಕೆ ಅನುಕೂಲವಾಗುವಂತ ಸಂಗತಿಗಳು ನಿಮ್ಮ ಪರವಾಗಿ ನಡೆಯುತ್ತದೆ. ಲಾಭದ ಶನಿಯೂ ಇದಕ್ಕೆ ಸಹಕಾರ ಕೊಡುತ್ತಾನೆ. ಆರನೇ ಮನೆಯ ಕೇತು ಸಹ ನಿಮ್ಮ ಪರಾಕ್ರಮ ಹೆಚ್ವಿಸುತ್ತಾನೆ. ಹಣದ ಹರಿವು ಉತ್ತಮವಾಗಿದೆ. ಮೂರನೇ ಮನೆಯ ಬುಧ ಶತ್ರುಗ್ರಹವಾದ ಕುಜನ ಜೊತೆ ಇರುವುದರಿಂದ ಸಹೋದರ ವರ್ಗಕ್ಕೆ ಕೊಂಚ ಮಾನಸಿಕ ಹಿಂಸೆ.
ವೃಷಭ ರಾಶಿಯ ವಾರ ಭವಿಷ್ಯ ಈ ವಾರ ಕೂಡ ನಿಮಗೆ ಎಂಟನೇ ಮನೆಯಲ್ಲಿ ಮೂರು ಗ್ರಹಗಳು ಸೇರಿಕೊಂಡಿದೆ. ಇದರಿಂದ ಮಾನಸಿಕ ಒತ್ತಡ ಹಾಗೂ ದೈಹಿಕ ಶ್ರಮ ಇರುತ್ತದೆ. ಮನೆಯವರಿಂದಲೇ ಮನಸ್ಸಿಗೆ ನೋವಾಗುವುದೂ ಮಾನಸಿಕವಾಗಿ ಕುಗ್ಗುವುದು ಹೀಗೆಲ್ಲ ನಡೆಯುತ್ತದೆ. ಆದರೆ ರಾಹು ಲಾಭ ಸ್ಥಾನದಲ್ಲಿಇದ್ದು ನೀವು ನೆಲಕ್ಕೆ ಬೀಳದಂತೆ ಕಾಪಾಡುತ್ತಾನೆ. ಹಣದ ಹರಿವು ಉತ್ತಮವಾಗಿದ್ದರೂ ಖರ್ಚು ಸಹ ಅಷ್ಟೇ ಇರುತ್ತದೆ. ಒಂಬತ್ತರಲ್ಲಿ ಸೂರ್ಯ ಇದ್ದು ತಂದೆಯ ಕಡೆಯಿಂದ ಬೆಂಬಲ ಸಹಕಾರ ಸಿಗುಬಮವ ಯೋಗ ಇದೆ.
ಮಿಥುನ ರಾಶಿಯ ವಾರ ಭವಿಷ್ಯ ಏಳನೇ ಮನೆಯಲ್ಲಿ ಮೂರು ಗ್ರಹಗಳುಇದ್ದು ಸಂಗಾತಿಯೊಡನೆ ಕೊಂಚ ಕಿರಿಕಿರಿ ಅಸಹಕಾರ ಮನಸ್ತಾಪ ಇರುತ್ತದೆ. ನಾಲ್ಕನೇ ಮನೆಯಲ್ಲಿ ಕೇತು ಇರುವುದು ನಿಮ್ಮ ವೈಯುಕ್ತಿಕ ಸುಖ ಸಂತೋಷಕ್ಕೆ ಕೊಂಚ ಧಕ್ಕೆ ಇದೆ. ವೃಥಾ ಅಲೆದಾಟ ನಿದ್ರಾಭಂಗ ಕಿರಿಕಿರಿ ಇರುತ್ತದೆ. ಹನ್ನೊಂದನೆಯ ಮನೆಯಲ್ಲಿ ಗುರು ಇದ್ದು ನಿಮ್ಮನ್ನು ಈ ಋಣಾತ್ಮಕ ಸಂಗತಿಗಳಿಂದ ಹೊರಗೆ ತರುತ್ತಾನೆ. ಆದಷ್ಟು ಮುಂದೆ ಹೋಗುವಂತೆ ಜೀವನ ಮುನ್ನಡೆಯುವಂತೆ ಸಹಕಾರ ನೀಡುತ್ತಾನೆ. ನೀವು ನೆಲ ಕಚ್ಚದಂತೆ ನಿಮ್ಮನ್ನು ಭದ್ರವಾಗಿ ಹಿಡಿದು ನಿಲ್ಲಿಸುತ್ತಾನೆ.
ಕಟಕ ರಾಶಿಯ ವಾರ ಭವಿಷ್ಯ ಗುರು ಬಲ ಶನಿಬಲ ಇಲ್ಲದಿದ್ದರೂ ಆರನೇ ಮನೆಯಲ್ಲಿ ಮೂರು ಗ್ರಹಗಳು ಸೇರಿ ನಿಮ್ಮ ಪರಾಕ್ರಮವನ್ಬು ಹೆಚ್ಚಿಸುತ್ತದೆ. ಮೂರನೇ ಮನೆಯ ಕೇತು ಸಹ ನಿಮಗೆ ಬೆಂಬಲವಾಗಿ ಇದ್ದಾನೆ. ಕೇತು ಹಣದ ಹರಿವನ್ನು ಉತ್ತಮ ಪಡಿಸುವುದಲ್ಲದೆ ಶತ್ರುಗಳನ್ನು ದೂರ ಮಾಡುತ್ತಾನೆ. ಕೊಂಚ ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸಿ ಏಕೆಂದರೆ ಅಷ್ಠಮಶನಿಯಿಂದ ಸಾಮಾಜಿಕವಾಗಿ ಮತ್ತು ಆರೋಗ್ಯದಲ್ಲಿ ಏರುಪೇರು ತರುತ್ತಾನೆ. ಆಂಜನೇಯನ ಸ್ತೋತ್ರ ಪಠಿಸಿ. ಧನ್ವಂತರಿಸ್ತೋತ್ರ ಹೇಳಿಕೊಳ್ಳಿ.
ಸಿಂಹ ರಾಶಿಯ ವಾರ ಭವಿಷ್ಯ ಈಗ ನಿಮಗೆ ಗುರುಬಲದ ಜೊತೆಗೆ ಐದನೇ ಮನೆಯಲ್ಲಿ ಮೂರು ಗ್ರಹಗಳಿದ್ದು ಅವುಗಳು ಕೂಡ ನಿಮಗೆ ಬೆಂಬಲ ಸೂಚಿಸುತ್ತದೆ. ಗುರುಬಲ ನಿಮಗೆ ಸರ್ವ ಶಕ್ತಿಯನ್ನು ಕಾರ್ಯ ಸಫಲತೆಯನ್ನು ಕೊಟ್ಟು ಕಾಪಾಡುತ್ತದೆ. ಒಳ್ಳೆಯ ಹೆಸರು ಕೀರ್ತಿ ಬಡ್ತಿ ಎಲ್ಲವೂ ಸಿಗುವ ಯೋಗ. ಅರ್ಹರಿಗೆ ವಿವಾಹಪ್ರಾಪ್ತಿ ಇದೆ. ಎರಡನೇ ಮನೆಯಲ್ಲಿ ಕೇತು ಇರುವು ಗೃಹಶಾಂತಿಗೆ ಭಂಗ, ಎಂಟರಲ್ಲಿ ರಾಹು ಇರುವುದು ಆರೋಗ್ಯಕ್ಕೆ ತೊಂದರೆ ಇದೆ.
ಕನ್ಯಾ ರಾಶಿಯ ವಾರ ಭವಿಷ್ಯ ಈಗ ರಾಶಿಯಲ್ಲಿ ಕೇತು ಏಳನೇ ಮನೆಯಲ್ಲಿ ರಾಹು ಇರುವುದು ಕೊಂಚ ತೊಂದರೆಯೇ ಆದರೂ ಆರರ ಶನಿ ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾನೆ. ವೃತ್ತಿಯಲ್ಲಿ ಏಳ್ಗೆ, ಹಣಕಾಸಿನ ಸಮೃದ್ಧಿ, ವಿದೇಶ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕೊಡುತ್ತದೆ. ಶತ್ರುಗಳು ದೂರವಾಗುತ್ತಾರೆ. ಆದರೆ ಗುರುಬಲ ಇಲ್ಲವಾದ್ದರಿಂದ ಕೊಂಚಮಟ್ಟಿಗೆ ಕೆಲವು ವಿಷಯದಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಯಾವುದಾದರೂ ಮುಖ್ಯ ವಿಷಯ ಕೊಂಚ ನಿಧಾನಗತಿಯಲ್ಲಿ ಸಾಗುತ್ತದೆ.
ತುಲಾ ರಾಶಿಯ ವಾರ ಭವಿಷ್ಯ ನಿಮಗೆ ಈಗ ಗುರುಬಲ ರಾಹುಬಲ ಇದೆ. ನಿಮಗೆ ಸಾಧ್ಯವೇ ಆಗದು ಎಂದು ಅಂದುಕೊಂಡ ಕೆಲಸಗಳೆಲ್ಲ ಈಗ ಸುಲಭ ಸಾಧ್ಯವಾಗಿ ಆಗುತ್ತದೆ. ನಿಮಗೆ ಅಂತರಂಗದಲ್ಲಿ ಒಂದುಶಕ್ತಿ ಇರುವಂತೆ ಅನಿಸುತ್ತದೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುತ್ತೀರಿ. ಅರ್ಹರಿಗೆ ವಿವಾಹಯೋಗ ಇದೆ. ಹಣದ ಹರಿವು ಉತ್ತಮವಾಗಿ ಇದೆ. ಮೂರನೇ ಮನೆಯಲ್ಲಿ ಮೂರು ಗ್ರಹಗಳಿದ್ದು ಅದೂಕೂಡ ನಿಮ್ಮ ಪರಾಕ್ರಮವನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಏಳ್ಗೆ ಇದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸನ್ನಿವೇಷ ಇದೆ. ಕುಟುಂಬದಲ್ಲಿ ಸಮೃದ್ಧಿ ಇದೆ.
ವೃಶ್ಚಿಕ ರಾಶಿಯ ವಾರ ಭವಿಷ್ಯ ಈಗ ಗುರುಬಲ ಇಲ್ಲ. ನಾನಾ ವಿಧವಾದ ಅಡ್ಡಿ ಆತಂಕಗಳು ಎದುರಾಗುತ್ತದೆ. ಹಣದ ಖರ್ಚು ಬಹಳ ಇರುತ್ತದೆ. ಆರೋಗ್ಯ ಕೂಡ ಜಾಗ್ರತೆ. ಎರಡನೇ ಮನೆಯಲ್ಲಿ ಮೂರು ಗ್ರಹಗಳು ಇರುವುದರಿಂದ ಹಣಕಾಸಿನ ಹರಿವು ಕೊಂಚ ಉತ್ತಮವಾಗಿದೆ. ಲಗ್ನಾಧಿಪತಿ ಏಳನೇ ಅಧಿಪತಿ ಲಾಭಾದಿಪತಿ ಮೂರೂ ಜನರ ಸಂಯೋಗ ನಿಮಗೆ ಒಂದು ಶುಭಸುದ್ದಿ ನೀಡುತ್ತದೆ. ಮೂರನೇ ಮನೆಯ ಸೂರ್ಯ ಕೂಡ ನಿಮಗೆ ಬೆಂಬಲವಾಗಿ ಇದ್ದಾನೆ. ಶಕ್ತಿ ಸಾಮರ್ಥ್ಯಗಳನ್ನು ಇಮ್ಮಡಿಗೊಳಿಸುತ್ತಾನೆ.
ಧನಸ್ಸು ರಾಶಿಯ ವಾರ ಭವಿಷ್ಯ ನಿಮ್ಮ ರಾಶಿಯಲ್ಲೇ ಮೂರು ಗ್ರಹಗಳ ಯುತಿಯೋಗ ನಿಮಗೆ ಶ್ರೇಯಸ್ಸು ಕೊಡುತ್ತದೆ. ಐದರಲ್ಲಿ ಗುರು ಮೂರರಲ್ಲಿ ಶನಿಕೂಡ ನಿಮಗೆ ಸರ್ವ ಭಾಗ್ಯಗಳನ್ನೂ ಕೊಡಲು ಸನ್ನದ್ಧರಾಗಿದ್ದಾರೆ. ಯಾವ ಕೆಲಸ ಮಾಡಿದರೂ ಜಯ ನಿಮ್ಮದು. ನಿಧಾನಗತಿಯಲ್ಲಿ ನಡೆಯುತ್ತಿದ್ದ ಕೆಲಸಗಳೆಲ್ಲ ಈಗ ತ್ವರಿತಗತಿಯಲ್ಲಿ ಬೆಳವಣಿಗೆ ಆಗುತ್ತದೆ. ನಿಮಗೇ ಅಚ್ಚರಿಯಾಗುವಷ್ಟು ಯಶಸ್ಸು ಅಭಿವೃದ್ಧಿ ಕಾಣುತ್ತೀರಿ. ವೃತ್ತಿಯಲ್ಲೂ ಯಶಸ್ಸಿದೆ.
ಮಕರ ರಾಶಿಯ ವಾರ ಭವಿಷ್ಯ ಅವಕಾಶಗಳು ಬರುತ್ತಿದ್ದರೂ ಕೈಗೆ ಹಿಡಿತ ಸಿಗುತ್ತಿಲ್ಲ. ಮಂದಗತಿಯಲ್ಲಿ ಸಾಗುತ್ತಿದೆ. ಖರ್ಚು ಹೆಚ್ಚಾಗಿದೆ. ವ್ಯಯಸ್ಥಾನದಲ್ಲಿ ಮೂರು ಗ್ರಹಗಳು ಇದ್ದು ಖರ್ಚು ವೆಚ್ಚಗಳನ್ನು ಹೆಚ್ಚು ಮಾಡುತ್ತದೆ. ಎರಡನೇ ಮನೆಯ ಶನಿಕುಟುಂಬದಲ್ಲಿ ಕೊಂಚ ಕಿರಿಕಿರಿ ಮಾಡುತ್ತಾನೆ. ಕೊಂಚ ಅಪವಾದ ಕೊಂಚ ಅವಗಣನೆಗೆ ಪಾತ್ರರಾಗುತ್ತೀರಿ. ರಾಹು ಮೂರನೇ ಮನೆಯಲ್ಲಿಇರುವುದೇ ಶಕ್ತಿ ನಿಮಗೆ. ನಿಮ್ಮನ್ನು ನೆಲಕ್ಕೆ ಬೀಳದಂತೆ ಕಾಪಾಡುತ್ತಾನೆ.
ಕುಂಭ ರಾಶಿಯ ವಾರ ಭವಿಷ್ಯ ನಿಮ್ಮ ರಾಶಿಯಲ್ಲೇ ಶನಿ ನಿಮ್ಮನ್ನು ಮುಂದುವರೆಯಲು ಬಿಡುತ್ತಿಲ್ಲ. ಎಲ್ಲ ಕೆಲಸಗಳೂ ನಿಧಾನ ಗತಿಯಲ್ಲಿ ಮುನ್ನಡೆಯುತ್ತದೆ. ಎರಡನೇ ಮನೆಯಲ್ಲಿ ರಾಹುವಿನಿಂದ ಕುಟುಂಬದ ಶಾಂತಿಗೆ ಧಕ್ಕೆ. ಎಂಟನೇ ಮನೆಯಲ್ಲಿ ಕೇತು ಇರುವುದರಿಂದ ಹರಿತವಾದ ಆಯುಧಗಳಿಂದ ತೊಂದರೆ ಇದೆ. ಗೃಹಿಣಿಯರಾದರೆ ತರಕಾರಿ ಕತ್ತರಿಸುವ ಚಾಕುವಿನಿಂದಲೂ ಗಾಯ ಆಗಬಹುದು. ಎಚ್ಚರಿಕೆಯಿಂದ ಇರಿ. ಲಾಭ ಸ್ಥಾನದಲ್ಲಿ ಮೂರು ಗ್ರಹಗಳು ಇದ್ದು ಧನಲಾಭ ಕೊಡುತ್ತದೆ.
ಮೀನ ರಾಶಿಯ ವಾರ ಭವಿಷ್ಯ ಎರಡನೇ ಮನೆಯಲ್ಲಿ ಗುರು ಇರುವುದು ಧನಲಾಭಕ್ಕೆ ಕಾರಣವಾದರೂ 12ನೇ ಮನೆಯ ಶನಿ ಖರ್ಚು ಮಾಡಿಸುತ್ತಾನೆ. ಹತ್ತನೇ ಮನೆಯಲ್ಲಿ ಮೂರು ಗ್ರಹಗಳು ಇವೆ. ವೃತ್ತಿ ಸಂಬಂಧವಾಗಿ ಬದಲಾವಣೆಗಳು ಇವೆ. ವೃತ್ತಿಯಲ್ಲಿ ಒಂದು ಮಹತ್ವದ ತಿರುವನ್ನು ಕಾಣುತ್ತೀರಿ. ನಿಮ್ಮ ರಾಶಿಯಲ್ಲೇ ರಾಹು ಇರುವುದು ಏಳನೇ ಮನೆ ಯಲ್ಲಿ ಕೇತು ಇರುವುದು ಕೊಂಚ ಋಣಾತ್ಮಕವಾಗಿರುತ್ತದೆ. ಏನೇ ಮಾಡಿದರೂ ಮನಸ್ಸಿಗೆ ಸಮಾಧಾನ ಇರುವುದಿಲ್ಲ.