#Exclusive NewsTop Newsಶಿಕ್ಷಣ

ಯುಪಿಎಸ್‌ಸಿ 2025 ಫಲಿತಾಂಶ ಪ್ರಕಟ; ಕರ್ನಾಟಕದ 22 ಮಂದಿಗೆ ಐಎಎಸ್ ಸಂಭ್ರಮ!


ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಾದ ಯುಪಿಎಸ್‌ಸಿ 2025ರ (UPSC CSE 2025) ಅಂತಿಮ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ದೇಶಾದ್ಯಂತ ಒಟ್ಟು 958 ಅಭ್ಯರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅನುಜ್ ಅಗ್ನಿಹೋತ್ರಿ (Anuj Agnihotri) ಮೊದಲ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಕರ್ನಾಟಕದ ಸಾಧನೆ:

ನಮ್ಮ ರಾಜ್ಯದ ಒಟ್ಟು 22 ಅಭ್ಯರ್ಥಿಗಳು ಈ ಬಾರಿ ಯುಪಿಎಸ್‌ಸಿಯಲ್ಲಿ ಗೆಲುವು ಸಾಧಿಸಿ ಸಾಧನೆ ಮಾಡಿದ್ದಾರೆ. ಇವರಲ್ಲಿ ಕಿರಣ್ ಕಮತೆ (Kiran Kamate) ಅವರು ದೇಶಕ್ಕೆ 53ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.


ಯುಪಿಎಸ್‌ಸಿ ಗೆದ್ದ ಕರ್ನಾಟಕದ ವೀರರ ಪಟ್ಟಿ:

ಅಭ್ಯರ್ಥಿಯ ಹೆಸರುಪಡೆದ ರ್ಯಾಂಕ್
ಕಿರಣ್ ಕಮತೆ53 (ಕರ್ನಾಟಕ ಟಾಪರ್)
ಸಂದೀಪ್ ಬಡದ್82
ಶ್ರೇಯಸ್ ಗೋಮೇಶ್169
ಚಿನ್ಮಯಿ ಪಿ.310
ಮನೋಜ್ ಜಿ.ಎಸ್.389
ಎ. ಮಧು436
ವರುಣ್ ಗೌಡ ಪಿ.462
ನಿವೇದಿತಾ ಸಿ. ಭಾವಿಮಣಿ469
ವಿಶಾಕಾ ಕದಂ504
ಸೂರಜ್ ಕೆ.ಎಲ್.525
ಧನಂಜಯ ಆರ್.554
ಉಲ್ಲಾಸ್ ಎಂ.ಎಸ್.556
ಮುತ್ತೇಶ್ ಗೌಡ ಎ.ಎಸ್.622
ಸಾಗರ್ ಎ.641
ಪಾಂಡುರಂಗ ಎಸ್. ಕಂಬಳಿ660
ಚಂದನ್ ವೈ.661
ಬಸವರಾಜ ಎಂ. ಜವಳಿ664
ಪ್ರವೀಣ್ ಹೆಚ್‌.ಟಿ.720
ಯತೀಶ್ ಎಂ.ಎ.732
ಬಸವರಾಜ ಎಂ. ಪಾಟೀಲ್739
ಅನಿರುದ್ಧ ಕಟ್ಟೀಮನಿ786
ಚಂದ್ರಶೇಖರ್880

Comments (0)

Your email address will not be published. Required fields are marked *

Back to top button