ಬೀದರ್ : ಬೀದರ್ ನಗರದ ಗುಂಪಾ ರೋಡ್‌ನಿಂದ ಚನ್ನಬಸವ ಪಟ್ಟದ್ದೆವರು ರಥಯಾತ್ರೆಯಲ್ಲಿ ಕುಳಿತು ರಂಗಮಂದಿರದವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಡೊಳ್ಳು ಬಾರಿಸುವ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗು ಪೌರಾಡಳಿತ ಸಚಿವ ರಹೀಂ ಖಾನ್.ಅವರು ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷ ಚನ್ನಬಸವ ಪಟ್ಟದೇವರಿಗೆ ಸನ್ಮಾನಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದಾರೆ. ಮೆರವಣಿಗೆಯುದ್ದಕ್ಕೂ ಕಲಾವಿದರ ತಂಡಗಳು ಹೆಜ್ಜೆ ಹಾಕಿದವು. ಮೆರವಣಿಗೆಯಲ್ಲಿ ಸಾಹಿತಿ, ಸ್ವಾತಂತ್ರ ಹೋರಾಟಗಾರರು, ಬಸವಾದಿ ಶರಣರ ವೇಷಧಾರಿ ಮಕ್ಕಳು ಗಮನಸೆಳೆದರು.ಮೆರವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಬುಡಾ ಅಧ್ಯಕ್ಷ ಬಸವರಾಜ್ ಜಾಬಶೆ ಇನ್ನಿತರರು ಉಪಸ್ಥಿತರಿದ್ದರು.