Monday, June 23, 2025
26.6 C
Bengaluru
Google search engine
LIVE
ಮನೆ#Exclusive News2028 ಮಾರ್ಚ್​ 29 ಕ್ಕೆ ಶುಕ್ರಗ್ರಹದ ಚೊಚ್ಚಲ ಅಧ್ಯಯನಕ್ಕೆ ಭಾರತದ ಸಿದ್ದತೆ!

2028 ಮಾರ್ಚ್​ 29 ಕ್ಕೆ ಶುಕ್ರಗ್ರಹದ ಚೊಚ್ಚಲ ಅಧ್ಯಯನಕ್ಕೆ ಭಾರತದ ಸಿದ್ದತೆ!

ನವದೆಹಲಿ: ಚಂದ್ರ, ಮಂಗಳ ಮತ್ತು ಸೂರ್ಯರ ಅಧ್ಯಯನದ ಬಳಿಕ ಭೂಮಿಯ ಅವಳಿ ಗ್ರಹ ಎಂದೇ ಖ್ಯಾತವಾದ ಶುಕ್ರನ ಅಧ್ಯಯನಕ್ಕೆ ಭಾರತ ಮುಂದಾಗಿದೆ. ಇದಕ್ಕಾಗಿ ಆರ್ಬಿಟರ್ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, 2028ರ ಮಾ. 29ರಂದು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮಂಗಳವಾರ ಘೋಷಿಸಿದೆ.

ಇದಕ್ಕೆ “ಶುಕ್ರಯಾನ-1′ ಎಂದು ನಾಮಕರಣ ಮಾಡಲಾಗಿದೆ. ಶುಕ್ರ ಗ್ರಹದ ವಾತಾವರಣ, ಮೇಲ್ಪದರ, ಭೌಗೋಳಿಕ ರಚನೆ, ಸೂರ್ಯನೊಂದಿಗೆ ಶುಕ್ರ ಹೊಂದಿರುವ ಸಂಬಂಧವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ. ಉಡಾವಣೆ ಹೇಗೆ?: ಇಸ್ರೋದ ಶಕ್ತಿಶಾಲಿ ರಾಕೆಟ್ ಎಂದು ಕರೆಸಿಕೊಳ್ಳುವ ಎಲ್‌ಎಂವಿ ಮಾರ್ಕ್-3 ಮೂಲಕ ಉಡಾವಣೆ ಮಾಡ ಲಾಗುತ್ತದೆ. ನಿಗದಿತ ಕಕ್ಷೆಗೆ ನೌಕೆಯನ್ನು ಮಾರ್ಕ್-3 ತಲುಪಿಸ ಲಿದೆ. ಬಳಿಕ ಭೂಮಿಯನ್ನು ಸುತ್ತುತ್ತ ನೂಕುಬಲವನ್ನು ಪಡೆಯುವ ನೌಕೆಯು ಅನಂತರ ಶುಕ್ರನತ್ತ ಯಾನವನ್ನು ಮುಂದುವರಿಸಲಿದೆ. ಅದು 2028ರ ಜು. 19ರಂದು ಕಕ್ಷೆಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

5ನೇ ದೇಶ ಎಂಬ ಖ್ಯಾತಿ: ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ಈಗಾಗಲೇ ಶುಕ್ರಯಾನವನ್ನು ಯಶಸ್ವಿಯಾಗಿ ಕೈಗೊಂಡಿವೆ. ಭಾರತ ಯಶಸ್ವಿಯಾದರೆ 5ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments