ಆಸ್ಟ್ರೇಲಿಯಾ: ಸಮುದ್ರ ತೀರದಲ್ಲಿ ಬರೋಬ್ಬರಿ 157 ಡಾಲ್ಫಿನ್ಗಳು ಸಾವನ್ನಪ್ಪಿರುವ ಘಟನೆ ಇಲ್ಲಿನ ವಾಯವ್ಯ ಪ್ರಾಂತ್ಯದ ತಾಸ್ಮಾನಿಯಾ ರಾಜ್ಯದ ಅರ್ಥೂರ್ ನದಿ ಸಮುದ್ರವನ್ನು ಸಂಗಮಿಸುವ ಸ್ಥಳದಲ್ಲಿ ಕಂಡು ಬಂದಿದೆ.
ಕಳೆದ 48 ಗಂಟೆಗಳಲ್ಲಿ 157 ಡಾಲ್ಫಿನ್ಗಳು ಸಾಯಲು, ಡಾಲ್ಫಿನ್ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್ನಂತಹ ಸಮುದ್ರ ಜೀವಿ ಇವುಗಳ ಸಾವಿಗೆ ಕಾರಣವಾಗಿರುವಂತೆ ಕಂಡಿದೆ ಎಂದು ಅಧಿಕಾರಿಗಳು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಕೆಲವು ಡಾಲ್ಫಿನ್ಗಳು ಸಾವು ಬದುಕಿನ ಹೋರಾಟ ನಡೆಸಿ ಗಂಭೀರ ಸ್ಥಿತಿಯಲ್ಲಿರುವುದರಿಂದ ಅವುಗಳನ್ನು ರಕ್ಷಿಸುವುದು ಕಷ್ಟವಾಗಿದೆ ಎಂದು ಅಲ್ಲಿನ ರಾಜ್ಯ ವನ್ಯಜೀವಿ ಅಧಿಕಾರಿ ಬ್ರೆಂಡೋನ್ ಕ್ಲಾರ್ಕ್ ಹೇಳಿದ್ದಾರೆ. ವೇಲ್ಸ್ಗಳು, ಡಾಲ್ಫಿನ್ಗಳ ಮೇಲೆ ಆಗಾಗ ಈ ರೀತಿಯ ದಾಳಿ ಮಾಡಿ ಹಾನಿ ಮಾಡುವುದು ಸಾಮಾನ್ಯವಾಗಿದ್ದು, ಇದನ್ನು ತಡೆಯಲು ವೆಟ್ಡಾಕ್ಟರ್ ಉಪಸ್ಥಿತಿ ಅವಶ್ಯವಾಗಿದೆ ಎಂದಿದ್ದಾರೆ.
ಡಾಲ್ಫಿನ್ಗಳು ವಲಸಿಗ ಪ್ರಾಣಿಯಾಗಿದ್ದು, ಜಗತ್ತಿನ ಎಲ್ಲೆಡೆ ಸಂಚರಿಸುತ್ತವೆ. ಕಳೆದ 50 ವರ್ಷದಲ್ಲಿ ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್ಗಳ ಮೇಲಿನ ಈ ರೀತಿಯ ದಾಳಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ. ಈ ಘೋರ ಘಟನೆಗೆ ಯಾವುದೇ ಸುಳಿವಿಲ್ಲದಿದ್ದರಿಂದ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ನಿಖರತೆ ಲಭ್ಯವಾಗುವ ಭರವಸೆ ಇದೆ ಎಂದು ಬ್ರೆಂಡೊನ್ ಕ್ಲಾರ್ಕ್ ತಿಳಿಸಿದ್ದಾರೆ.
ಈ ಕಿನಾರೆ ಪ್ರದೇಶ ಜನವಸತಿ ರಹಿತವಾದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಈ ಕಡಲ ತೀರಕ್ಕೆ ವಿಶೇಷ ಸಾಧನಗಳನ್ನು ತರುವುದು ಕೂಡ ಸವಾಲುದಾಯಕವಾಗಿದ್ದು, ಇದು ದುರ್ಗಮ ಮಾರ್ಗವಾಗಿದೆ ಎಂದು ತಾಸ್ಮಾನಿಯಾದ ಪರಿಸರ ವಿಭಾಗ ತಿಳಿಸಿದೆ.