ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು ಎಂದು ಪರಿಗಣಿಸಲ್ಪಟ್ಟಿರುವ ಈ ಬೆಕ್ಕಿನ ಹೆಸರು ನಳ. ಈ ಬೆಕ್ಕು 852 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಕೂಡ ಈ ಬೆಕ್ಕು ಪಡೆದುಕೊಂಡಿದೆ. ಇತ್ತೀಚಿಗಷ್ಟೇ ಒಟ್ಟು 3,300 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಜರ್ಮನ್ ಶೆಫರ್ಡ್ ತಳಿಯ ಗುಂಥರ್-6 ಎಂಬ ಹೆಸರಿನ ವಿಶ್ವದ ಅತ್ಯಂತ ಶ್ರೀಮಂತ ಶ್ವಾನ ಭಾರೀ ಸುದ್ದಿಯಲ್ಲಿತ್ತು. ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಜಾಗ ಪಡೆದಿರುವ ವಿಶ್ವದ ಶ್ರೀಮಂತ ಬೆಕ್ಕು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಬೆಕ್ಕು ಬರೀ ಇನ್ಸ್ಟಾಗ್ರಾಮ್ನಲ್ಲಿ ಪ್ರತೀ ಪೋಸ್ಟ್ಗೆ 12ಲಕ್ಷ ರೂ. ಸಂಭಾವನೆಯನ್ನು ಪಡೆಯುತ್ತದೆ. ಇದಲ್ಲದೇ ಅತ್ಯಂತ ಜನಪ್ರಿಯ ಬೆಕ್ಕು ಎಂದೇ ಗಿನ್ನೆಸ್ ವಿಶ್ವ ದಾಖಲೆಯನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ಅನೇಕರು ಮನೆಯ ಸಾಕುಪ್ರಾಣಿಗಳಲ್ಲಿ ಮಕ್ಕಳ ಪ್ರೀತಿಯನ್ನು ಕಾಣುತ್ತಿದ್ದಾರೆ, ನಗರ ಪ್ರದೇಶಗಳಲ್ಲಿ ಶ್ರೀಮಂತ ಕುಟುಂಬಗಳು ಶ್ವಾನಗಳನ್ನು ಹಾಗೂ ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ಎಲ್ಲಾ ವಿಶೇಷ ಸೌಲಭ್ಯವನ್ನು ನೀಡಿ ಸಾಕುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು. ಕೆಲವು ಮನುಷ್ಯರಿಗಿಲ್ಲದ ಸೌಲಭ್ಯಗಳು ಈ ಪ್ರಾಣಿಗಳಿವೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ಮುದ್ದಿನ ಶ್ವಾನವೊಂದಕ್ಕೆ ಲಕ್ಷಾಂತರ ರೂಪಾಯಿಯ ಚಿನ್ನದ ಸರವನ್ನು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಬೆಕ್ಕಿನ ಸರದಿ. ತನ್ನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿರುವ ಜಗತ್ತಿನ ಶ್ರೀಮಂತ ಬೆಕ್ಕಿನ ಬಗ್ಗೆ ನಾವಿಲ್ಲಿ ನಿಮಗೆ ಹೇಳ್ತಿದ್ದಿವಿ. ಈ ಬೆಕ್ಕಿನ ಹೆಸರು ನಾಲಾ. ಇದು ಜಾಗತಿಕವಾಗಿ 100 ಮಿಲಿಯನ್ ನೆಟ್‌ವರ್ತ್ ಅನ್ನು ಹೊಂದಿದೆ. 100 ಮಿಲಿಯನ್ ಎಂದರೆ ಭಾರತೀಯ ರೂಪಾಯಿಗಳಲ್ಲಿ 839 ಸಾವಿರ ಕೋಟಿ ರೂಪಾಯಿಗಳು. ಹೀಗಾಗಿ ಈ ಬೆಕ್ಕು ಜಗತ್ತಿನ ಅತ್ಯಂತ ಶ್ರೀಮಂತ ಬೆಕ್ಕು ಎನಿಸಿದೆ ಎಂದು ಕ್ಯಾಟ್ ಡಾಟ್ ಕಾಮ್ ವರದಿ ಮಾಡಿದೆ.
ನಲಾ ಹೀಗೆ ಸೂಪರ್ ರಿಚ್ ಆಗಿದ್ದೇಗೆ?
ನಲಾ ಅಮೆರಿಕಾದ ಕ್ಯಾಲಿಫೋರ್ನಿಯಾದ ಯಾಮೀಸ್-ಟ್ಯಾಬಿ ಮಿಶ್ರ ಪ್ರಬೇಧದ ಬೆಕ್ಕು. 2010ರಲ್ಲಿ ವಾರಿಸಿರಿ ಮೆಥಾಚಿಟ್ಟಿಫಾನ್ (Varisiri Methachittiphan) ಎಂಬುವವರು ಈ ಬೆಕ್ಕನ್ನು ಪ್ರಾಣಿಗಳ ಆಶ್ರಯತಾಣದಿಂದ ದತ್ತು ಪಡೆದಾದ ನಲಾಗೆ ಕೇವಲ ಐದು ತಿಂಗಳು ವಯಸ್ಸಾಗಿತ್ತು. 2012ರಲ್ಲಿ ವಾರಿಸಿರಿ ಅವರು ಈ ಬೆಕ್ಕಿನ ಫೋಟೋಗಳನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳುವುದಕ್ಕಾಗಿ ಇನ್ಸ್ಟಾಗ್ರಾಮ್‌ನಲ್ಲಿ ಅದರ ಹೆಸರಿನಲ್ಲಿ ಖಾತೆಯೊಂದನ್ನು ತೆರೆದರು. ಇದು ಸ್ವಲ್ಪ ಸಮಯದಲ್ಲೇ ಜನರ ಗಮನವನ್ನು ಸೆಳೆಯಿತು. ಕ್ರಮೇಣ ದಿನ ಕಳೆಯುತ್ತಿದ್ದಂತೆ ನಲಾಗೆ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯ್ತು. ಅಲ್ಲದೇ ಕ್ರಮೇಣ ಈ ಫಾಲೋವರ್‌ಗಳ ಸಂಖ್ಯೆ ಎಷ್ಟು ಹೆಚ್ಚಾಯ್ತೆಂದರೆ 4.5 ಮಿಲಿಯನ್ ಫಾಲೋವರ್‌ಗಳನ್ನು ಈ ಬೆಕ್ಕು ಗಳಿಸಿತು. ಇದರಿಂದ ನಲಾಗೆ ಇನ್ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವದಾಖಲೆ ಮಾಡಲು ಸಾಧ್ಯವಾಯ್ತು. 2020ರ ಮೇ ತಿಂಗಳಲ್ಲಿ ನಲಾಗೆ ಗಿನ್ನೆಶ್ ವಿಶ್ವದಾಖಲೆ ಸಂಸ್ಥೆ ಈ ಬಿರುದು ನೀಡಿ ಗೌರವಿಸಿದೆ