ಅಮರನಾಥ ಯಾತ್ರೆ ಮುಗಿಸಿ ಪಂಜಾಬ್​ನ ಹೋಶಿಯಾರ್​ಪುರಕ್ಕೆ ಹಿಂದಿರುಗುತ್ತಿರುವಾಗ ಬಸ್​ನ ಬ್ರೇಕ್​ ಫೇಲ್​ ಆದ ಪರಿಣಾಮ ಯಾತ್ರಿಕರು ಬಸ್ನಿಂದ ಹಾರಿ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ಹಿಂತಿರುಗುತ್ತಿದ್ದ ಸುಮಾರು 40 ಯಾತ್ರಾರ್ಥಿಗಳನ್ನು ಹೊತ್ತ ಬಸ್, ಬ್ರೇಕ್ ವೈಫಲ್ಯದಿಂದಾಗಿ ಬನಿಹಾಲ್ ಬಳಿಯ ನಚ್ಲಾನಾದಲ್ಲಿ ನಿಲ್ಲಿಸಲು ವಿಫಲವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆ ಹಾಗೂ ಪೊಲೀಸ್​ ಸಿಬ್ಬಂದಿ ಬಸ್​ ಅನ್ನು ಕಷ್ಟಪಟ್ಟು ತಡೆದಿದ್ದಾರೆ, ಹೀಗಾಗಿ ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿ ಸಂಭಾವ್ಯ ಅಪಘಾತವನ್ನು ತಪ್ಪಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಲಿಸುತ್ತಿದ್ದ ಬಸ್​ನಿಂದ ಹತ್ತು ಮಂದಿ ಕೆಳಗೆ ಹಾರಿರುವ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ, ಅದರಲ್ಲಿ ಮೂವರು ಮಹಿಳೆಯರು ಒಂದು ಮಗು ಕೂಡ ಇತ್ತು.

ಚಲಿಸುತ್ತಿದ್ದ ವಾಹನದಿಂದ ಯಾತ್ರಾರ್ಥಿಗಳು ಜಿಗಿಯುತ್ತಿರುವುದನ್ನು ಗಮನಿಸಿದ ಸೇನಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಬಸ್‌ನ ಟೈರ್‌ಗಳ ಕೆಳಗೆ ಕಲ್ಲುಗಳನ್ನು ಇಟ್ಟು ಹೊಳೆಗೆ ಬೀಳದಂತೆ ತಡೆದಿದ್ದಾರೆ. ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮೇ ತಿಂಗಳಲ್ಲಿ, ಜಮ್ಮುವಿನ ಅಖ್ನೂರ್‌ನಲ್ಲಿ ಬಸ್ಸು ಕಮರಿಗೆ ಬಿದ್ದ ಪರಿಣಾಮ 22 ಜನರು ಸಾವನ್ನಪ್ಪಿದರು ಮತ್ತು ಕನಿಷ್ಠ 50 ಜನರು ಗಾಯಗೊಂಡಿದ್ದರು .

https://twitter.com/NgoPatelNagar/status/1808333385305047307?ref_src=twsrc%5Etfw%7Ctwcamp%5Etweetembed%7Ctwterm%5E1808333385305047307%7Ctwgr%5E70f0dd9d3cadc76a26672802ba0163dcdb6aa88f%7Ctwcon%5Es1_&ref_url=https%3A%2F%2Ftv9kannada.com%2Fnational%2F10-injured-as-amarnath-yatra-pilgrims-jump-off-moving-bus-due-to-brake-failure-in-jammu-and-kashmir-kannada-news-nyr-859871.html

ಉತ್ತರ ಪ್ರದೇಶ ಮತ್ತು ಹರಿಯಾಣದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ ಕಿಕ್ಕಿರಿದು ತುಂಬಿತ್ತು ಮತ್ತು 80 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ರೈಸಿ ಜಿಲ್ಲೆಯ ಪ್ರಸಿದ್ಧ ಶಿವ ಖೋರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಜಮ್ಮು-ಪೂಂಚ್ ಹೆದ್ದಾರಿಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

By admin

Leave a Reply

Your email address will not be published. Required fields are marked *

Verified by MonsterInsights