#Exclusive NewsTop News

ಸೋಡಿಯಂ ಪ್ರತಾಪ್​ಗೆ 10 ದಿನ ನ್ಯಾಯಾಂಗ ಬಂಧನ…

ತುಮಕೂರು ‌ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಪ್ರಕರಣದಿಂದ ಡ್ರೋನ್ ಪ್ರತಾಪ್​ಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಡ್ರೋನ್ ಪ್ರತಾಪ್ ಈಗ ಸೋಡಿಯಂ ಪ್ರತಾಪ್ ಆಗಿದ್ದಾನೆ!

ಕಳೆದ ಮೂರು ದಿನಗಳಿಂದ ಡ್ರೋನ್ ಪ್ರತಾಪ್​ನನ್ನು ಮಿಡಿಗೇಶಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭಾನುವಾರ ಇಡೀ‌ ದಿನ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಪೊಲೀಸರು, ಡ್ರೋನ್ ಪ್ರತಾಪ್ ಮನೆ ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಮಹಜರ್ ಮಾಡಿದ್ದಾರೆ. ಜೊತೆಗೆ ವಿಡಿಯೋ ಚಿತ್ರಿಕರಿಸಿದ್ದ ಕ್ಯಾಮರಾಮನ್ ವಿನಯ್ ಹಾಗೂ ಸೋಡಿಯಂ ಖರೀದಿಗೆ ಸಹಕಾರ ‌ನೀಡಿದ್ದ ಪ್ರಜ್ವಲ್​ನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಡ್ರೋಣ್ ಪ್ರತಾಪ್​ನನ್ನು 10 ದಿನ ನ್ಯಾಯಾಂಗ ಬಂಧನವನ್ನು ವಿಧಿಸಿದ    ಮಧುಗಿರಿ ಜೆಎಂಎಫ್​ಸಿ ಕೋರ್ಟ್​​

Comments (0)

Your email address will not be published. Required fields are marked *

Back to top button