ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಬಂಧನವಾಗಿ ಇಲ್ಲಿಗೆ ಬರೋಬ್ಬರಿ ಒಂದು ತಿಂಗಳು ಪೂರೈಸಿದೆ. ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ (ಜೂ.11) ನಟನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲಿಂದ ಇಲ್ಲಿವರೆಗೆ ಕೊಲೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದರ ಕುರಿತು ಟೈಮ್‌ಲೈನ್ ಇಲ್ಲಿದೆ.
ಜೂನ್ 8 (ಶನಿವಾರ)
ಬೆಳಗ್ಗೆ 11 ಗಂಟೆ ಸುಮಾರಿಗೆ ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಲಾಗಿತ್ತು. ಫಾರ್ಮಸಿಯಿಂದ ಕರೆತಂದು ರಾಘವೇಂದ್ರ ಎಂಬಾತ ಕಿಡ್ನ್ಯಾಪ್ ಮಾಡಿದ್ದ. ಮಧ್ಯಾಹ್ನ 3:30-4 ಗಂಟೆ ಸುಮಾರಿಗೆ ಆರೋಪಿಗಳು ಬೆಂಗಳೂರು ತಲುಪಿದ್ದರು. ಆರ್ಆರ್ ನಗರ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿತ್ತು. ಮನಸೋ ಇಚ್ಛೆ ಹಲ್ಲೆ ನಡೆಸಿ ಅಮಾನುಷವಾಗಿ ‘ಡಿ ಗ್ಯಾಂಗ್’ ಕೊಲೆ ಮಾಡಿತ್ತು. ನಟ ದರ್ಶನ್, ಪವಿತ್ರಾ ಗೌಡ ಗ್ಯಾಂಗ್‌ನಿಂದ ಈ ಹಲ್ಲೆ, ಕೊಲೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಜೆ ಆರು ಗಂಟೆ ವೇಳೆಗೆ ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದ. ಈ ವೇಳೆ ಮನೆಯಲ್ಲಿದ್ದ ದರ್ಶನ್‌ಗೆ ವಿನಯ್ ಆ್ಯಂಡ್ ಟೀಂ ವಿಷಯ ಮುಟ್ಟಿಸಿತು. ಸಾವಿನ ವಿಚಾರ ತಿಳಿದು ಕಂಗಾಲಾಗಿ ನಟ ಆತಂಕಕ್ಕೀಡಾದರು. ನಂತರ ಶವ ವಿಲೇವಾರಿ ಮಾಡಲು ಹಣಕಾಸು ಡೀಲ್ ಮಾಡಿಕೊಳ್ಳಲಾಗಿತ್ತು. ಪ್ರದೂಷ್ ಟೀಂಗೆ 30 ಲಕ್ಷ ಹಣ ಕೊಟ್ಟು ಡೀಲ್ ಮಾಡಲಾಗಿತ್ತು. ಆರಂಭದಲ್ಲಿ ಶವ ವಿಲೇವಾರಿ ಮಾಡಲು ಆರೋಪಿಗಳು ಹಿಂದೇಟು ಹಾಕಿದರು. ನಂತರ ಮೈಸೂರಿಗೆ ತೆರಳಿ ದರ್ಶನ್ ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ರಾತ್ರಿ 1:30 ರ ಸುಮಾರಿಗೆ ಸ್ಕಾರ್ಪಿಯೋ ಕಾರಿನಲ್ಲಿ ಶವ ಸಾಗಾಟ ಮಾಡಲಾಯಿತು. ಪ್ರದೂಷ್‌ಗೆ ಸೇರಿದ ಕಾರಿನಲ್ಲಿ ಶವ ವಿಲೇವಾರಿ ಮಾಡಲಾಯಿತು. ಮನಹಳ್ಳಿ ರಿಂಗ್ ರಸ್ತೆಯ ರಾಜಕಾಲುವೆ ಬಳಿ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು. ರಾಘವೇಂದ್ರ, ನಿಖಿಲ್ ನಾಯಕ್, ಕಾರ್ತಿಕ್ ಅಲಿಯಾಸ್ ಕಪ್ಪೆ ಹಾಗೂ ಕೇಶವಮೂರ್ತಿಯಿಂದ ಶವ ವಿಲೇವಾರಿ ಮಾಡಿದ್ದವರು.
ಜೂನ್ 9 (ಭಾನುವಾರ)
ಬೆಳಗ್ಗೆ 8 ಗಂಟೆಗೆ ಸುಮನಹಳ್ಳಿ ರಾಜಕಾಲುವೆ ಬಳಿ ಶವ ಪತ್ತೆಯಾಯಿತು. ಸತ್ವ ಅಪಾರ್ಟ್ಮೆಂಟ್ ಸೆಕ್ಯುರಿಟಿ ಶವ ಪತ್ತೆಹಚ್ಚಿದರು. ಸೆಕ್ಯುರಿಟಿ ಗಾರ್ಡ್, ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದರು. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಅಪರಿಚಿತ ಶವದ ಬಗ್ಗೆ ಪೊಲೀಸರ ತನಿಖೆ ಆರಂಭಿಸಿದ್ದರು.
ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಾಂತೆ ನಾಲ್ವರು ಆರೋಪಿಗಳು ಪೊಲೀಸರ ಬಳಿ ಸರೆಂಡರ್ ಆದರು. ಹಣಕಾಸು ವಿಚಾರವಾಗಿ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ರಾಘವೇಂದ್ರ, ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಸರೆಂಡರ್ ಆದರು. ಪೊಲೀಸರು ನಾಲ್ವರು ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು. ಸೋಮವಾರ ರಾತ್ರಿ ಆರೋಪಿಗಳು ಕೊಲೆ ಕೇಸ್‌ಗೆ ಮೇಜರ್ ಟ್ವಿಸ್ಟ್ ಕೊಟ್ಟರು. ನಟ ದರ್ಶನ್ ಹಾಗೂ ಪವಿತ್ರಾಗೌಡ ಹೆಸರನ್ನು ಆರೋಪಿಗಳು ಬಾಯಿಬಿಟ್ಟರು. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಭೆ ಮಾಡಲಾಯಿತು. ಸಭೆ ನಡೆಸಿ ದರ್ಶನ್ ಎಲ್ಲಿದ್ದಾರೆ ಅಂತಾ ಮಾಹಿತಿ ಸಂಗ್ರಹಿಸಲಾಯಿತು.
ಬೆಳ್ಳಂಬೆಳಗ್ಗೆ ಎಸಿಪಿ ಚಂದನ್ ನೇತೃತ್ವದ ಮೈಸೂರಿಗೆ ಪೊಲೀಸರ ಟೀಂ ತೆರಳಿತ್ತು. ಈ ವೇಳೆ ದರ್ಶನ್ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿದ್ದರು. ಹೋಟೆಲ್‌ನಿಂದ ದರ್ಶನ್ ವಶಕ್ಕೆ ಪಡೆದು ಕರೆತಂದರು. 11:30 ರ ಸುಮಾರಿಗೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದರು. ನಂತರ ಆರ್‌ಆರ್ ನಗರ ಮನೆಯಿಂದ ಪವಿತ್ರಾಗೌಡ ಕಸ್ಟಡಿಗೆ ತೆಗೆದುಕೊಂಡರು. ಪೊಲೀಸ್ ಠಾಣೆಯಲ್ಲಿ ಇಬ್ಬರ ಪ್ರಾಥಮಿಕ ವಿಚಾರಣೆ ನಡೆಸಲಾಯಿತು. ಪೊಲೀಸರಿಂದ ನಟ ದರ್ಶನ್ ಹಾಗೂ ಪವಿತ್ರಾಗೌಡ ಬಂಧನವಾಯಿತು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಒಟ್ಟು 17 ಮಂದಿ ಬಂಧನವಾಯಿತು. ಜೂನ್ 11ರಂದು ಆರೋಪಿಗಳನ್ನ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದರು.
ಜೂನ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಪೊಲೀಸರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ವಿಚಾರಣೆ ನಡೆಸಿದರು. ನಂತರ ಸ್ಥಳ ಮಹಜರು, ಮನೆಯಲ್ಲಿ ಪರಿಶೀಲನೆ ನಡೆಸಿದರು. ಜೂನ್ 15 ರಂದು ಕೋರ್ಟ್‌ಗೆ ಹಾಜರು ಪಡಿಸಿದರು. ಪುನಃ ಐದು ದಿನ ಕಸ್ಟಡಿಗೆ ಪಡೆದರು. ಜೂ.20 ರ ವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದರು. ಈ ವೇಳೆ ನಟ ದರ್ಶನ್ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಜೂ.19 ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಯಿತು. ರಕ್ತ, ಕೂದಲು ಸ್ಯಾಂಪಲ್ ಪಡೆದು ಡಿಎನ್ಎ ಟೆಸ್ಟ್ ಮಾಡಲಾಯಿತು.
ಅಂದು ಸಂಜೆ ಮತ್ತೆ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ದರ್ಶನ್ ಸೇರಿ ನಾಲ್ವರನ್ನ ಎರಡು ದಿನ ಕಸ್ಟಡಿಗೆ ಪಡೆಯಲಾಯಿತು. ಹೆಚ್ಚಿನ ವಿಚಾರಣೆ ಸಲುವಾಗಿ ಜೂ.22 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಎರಡು ದಿನಗಳ ಕಾಲ ಹೆಚ್ಚುವರಿ ವಿಚಾರಣೆಯನ್ನು ಪೊಲೀಸರು ನಡೆಸಿದರು
ಅಂದು ಸಂಜೆ0 ಎಸಿಎಂಎಂ ಕೋರ್ಟ್‌ಗೆ ದರ್ಶನ್ ಸೇರಿ ನಾಲ್ವರನ್ನ ಹಾಜರುಪಡಿಸಲಾಯಿತು. ಕೋರ್ಟ್ ವಿಚಾರಣೆ ನಡೆಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ರೇಣುಕಾಸ್ವಾಮಿ ಕೊಲೆ ಸಂಬಂಧ ದರ್ಶನ್ ಒಟ್ಟು 12 ದಿನ ಪೊಲೀಸ್ ಕಸ್ಟಡಿಯಲ್ಲಿದ್ದರು. ಜು.4 ರಂದು ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತು. 14 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಲಾಯಿತು. ಜು.18 ರ ವರೆಗೆ ವಿಸ್ತರಿಸಲಾಯಿತು. ಸದ್ಯ ನಟ ದರ್ಶನ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ.
Phone Number : +91-9164072277
Email id : salesatfreedomtv@gmail.com