ಕ್ರೈಂ ಸ್ಟೋರಿ

ಸೂಸೈಡ್ ಡ್ರಾಮಾ.. ಡ್ರೈವರ್ ಜತೆ ಹಂಗಾಮ..!

ಕಾರವಾರದ ಕಿಲಾಡಿ ಲೇಡಿ ಅರೆಸ್ಟ್ ಆಗಿದ್ದೆಲ್ಲಿ ಗೊತ್ತಾ..?
ಕಾರವಾರ : ಸೂಸೈಡ್ ನಾಟಕ ಆಡಿ ಅನುಕಂಪ ಗಿಟ್ಟಿಸಿದ್ದ ಕಿಲಾಡಿ ಲೇಡಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಇತಂಹದೊಂದು ವಿಚಿತ್ರ ಘಟನೆ ಕಾರವಾರದ ಹಳ್ಳಿಯೊಂದರಲ್ಲಿ ನಡೆದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ನಿವೇದಿತ ಎಂಬಾಕೆ ಆತ್ಮಹತ್ಯೆಯ ಕತೆ ಕಟ್ಟಿದ್ದಳು. ತನ್ನ ಎರಡು ಗಂಡು ಮಕ್ಕಳನ್ನು ಕುಮಟಾದ ಬಸ್ ನಿಲ್ದಾಣದ ಬಳಿ ತನ್ನ ಬೈಕ್ ನಲ್ಲಿ ಕರೆತಂದು ಬಿಟ್ಟುಹೋಗಿದ್ದಳು. ಗೆಳತಿಯ ಮನೆಗೆ ಹೋಗಿ ಬರುವುದಾಗಿ ಮಕ್ಕಳಿಗೆ ಹೇಳಿದ್ದಳು. ಆದರೆ, ಸ್ಕೂಟರ್ ಅನ್ನು ಹತ್ತಿರದ ಬೀಚ್ ಬಳಿ ನಿಲ್ಲಿಸಿ ಮಾಯವಾಗಿದ್ದಳು. ಮೊಬೈಲ್, ತಾಳಿ, ಕಾಲುಂಗುರವನ್ನು ಬೈಕ್ ನಲ್ಲೇ ಇಟ್ಟು, ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿದ್ದಳು. ಈಕೆ ಸೂಸೈಡ್ ಮಾಡಿಕೊಂಡಿರಬಹುದೆಂದು ಜನ ಆಕೆ ಪರ ಅಯ್ಯೋ ಪಾಪ ಅನ್ನುತ್ತಿದ್ದರು. ಪ್ರಕರಣದ ತಲೆ ಕೆಡಿಸಿಕೊಂಡಿದ್ದ ಪೊಲೀಸರು, ತನಿಖೆಯಲ್ಲಿ ಬಯಲಾದ ಸತ್ಯಕ್ಕೆ ತಾವೇ ಶಾಕ್ ಆಗಿದ್ದರು. ಕಾಣೆಯಾಗಿ ನಾಲ್ಕು ದಿನ ಬಳಿಕ ಹೊನ್ನಾವರದ ಆಟೋಚಾಲಕನೊಬ್ಬನ ಮನೆಯಲ್ಲಿದ್ದ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿದರು. ಅನೈತಿಕ ಸಂಬಂಧವೇ ಆತ್ಮಹತ್ಯೆಯ ನಾಟಕಕ್ಕೆ ಕಾರಣ ಎನ್ನಲಾಗಿದೆ.

Comments (0)

Your email address will not be published. Required fields are marked *

Back to top button