‘ಸಿಎಂ ಸಿದ್ದು’ ಡಿಸಿಎಂ ಡಿಕೆಶಿ
ಕಲಬುರಗಿ : ವಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದ ವಿಚಾರವಾಗಿ ಮಾತನಾಡಿದ್ದಾರೆ.ಹೈಕಮಾಂಡ್ ಬಹಳ ಸ್ಪಷ್ಟವಾಗಿ ಹೇಳಿದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸದ್ಯಕ್ಕೆ ಹುದ್ದೆ ಖಾಲಿ ಇಲ್ಲ , ಈ ವಿಚಾರದಲ್ಲಿ ಗೊಂದಲವೇನಿದೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಎಲ್ಲಾ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗೊ ಕಾರ್ಯ ಕಾಂಗ್ರೆಸ್ ನಿಂದ ನಡೆಯುತ್ತಿದೆ ,ನಮ್ಮ ರಾಜ್ಯದ ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ ಗ್ಯಾರಂಟಿ ಯೋಜನೆಗಳ ಮೂಲಕ ನಾವು ಜನರ ಹತ್ತಿರವಾಗುತ್ತಿದ್ದೇವೆ. ನಮ್ಮ ನಾಡು ನಮ್ಮ ಜನ ಕಾಂಗ್ರೆಸ್ ಸರ್ಕಾರಕ್ಕೆ ಬಹು ಮುಖ್ಯ. ನಮ್ಮ ಅಧಿಕಾರವನ್ನ ಸಹಿಸಿಕೊಳ್ಳದ ವರ್ಗ ನಮ್ಮ ಬಗ್ಗೆ ತಪ್ಪು ಮಾಹಿತಿಗಳನ್ನ ಜನರಿಗೆ ಕೊಡುತ್ತಿದ್ದಾರೆ ,ವಿಧಾನ ಸಭೆಯಲ್ಲಿ ಜನ ಅವರಿಗೆ ತಕ್ಕ ಪಾಠವನ್ನ ಕಲಿಸಿದ್ದಾರೆ.ಲೋಕ ಸಭಾ ಚುನಾವಣೆಯಲ್ಲೂ ಜನ ಅವರಿಗೆ ಸೋಲಿನ ರುಚಿಯನ್ನ ತೋರಿಸಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಅಬ್ಬರಿಸಿದರು.
ಸಿಎಂ ಹುದ್ದೆ ಖಾಲಿ ಇಲ್ಲ
RELATED ARTICLES