ಸರ್ಕಾರಿ ಕಾಲೇಜು ಲಚ್ಚರರ್ಗೆ ‘ಲೋಕಾ’ ಶಾಕ್

ಮೈಸೂರು : ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕ, ಆದ್ರೆ ಮಾಡೊದೆಲ್ಲ ಕಳ್ಳ ವ್ಯವಹಾರ. ವರ್ಗಾವಣೆ ದಂದೆ, ವಂಚನೆ ವಿಚಾರದಲ್ಲಿ ದೂರು ಬಂದ ಹಿನ್ನಲೆ ಲಚ್ಚರರ್ ಮಹದೇವ ಸ್ವಾಮಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತರಿಂದ ದಾಳಿ ನಡೆಸಿದ್ದಾರೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಮನೆ, ಕಚೇರಿ, ಶಾಲೆ, ವಾಣಿಜ್ಯ ಕಟ್ಟಡ ಹಾಗೂ ಸಂಬಂಧಿಕರ ಮನೆಯಲ್ಲಿ ಶೋಧ ಮಾಡಲಾಗಿದೆ.

ಮೈಸೂರಿನ ಜೆಪಿ.ನಗರದಲ್ಲಿ ಮಹದೇವ ಸ್ವಾಮಿ ವಾಸವಿದ್ದರು. ಮಹದೇವಸ್ವಾಮಿಗೆ ಸೇರಿದ ಮೈಸೂರಿನ ಗುರುಕುಲ ವಿದ್ಯಾಸಂಸ್ಥೆ, ಸ್ಟೀಲ್ ಅಂಗಡಿಗಳು, ಬಟ್ಟೆ ಅಂಗಡಿ, ನಂಜನಗೂಡು ಸ್ಟೀಲ್ ಅಂಗಡಿ, ಕೆಆರ್.ನಗರದ ಸ್ಟೀಲ್ ಅಂಗಡಿ ಹಾಗೂ ಕಚೇರಿಯ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಮನೆಯಲ್ಲಿ ಶೋಧಕಾರ್ಯ ಮುಂದುವರೆದಿದೆ. ವರ್ಗಾವಣೆ ವಿಚಾರವಾಗಿ ಈತನ ವಿರುದ್ಧ ಲೋಕಾಯುಕ್ತರಿಗೆ ದೂರು ಹೋಗಿತ್ತು. ಹಣಕಾಸಿನ ವಂಚನೆ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಲಚ್ಚರರ್ಗೆ ಬೆಳ್ಳಂಬೆಳಿಗ್ಗೆ ಮೈಸೂರು ಲೋಕಾಯುಕ್ತರು ಶಾಕ್ ನೀಡಿದ್ದಾರೆ.




