ಹುಬ್ಬಳ್ಳಿ : ನಾನು ಹುಬ್ಬಳ್ಳಿಗೆ ಎರಡನೇ ಬಾರಿಗೆ ಭೇಟಿ ಕೊಟ್ಟಿದ್ದೇನೆ. ಕಳೆದ ಬಾರಿ ಭೇಟಿಯ ಸಂದರ್ಭದಲ್ಲಿ ಆನ್ಸೆನ್ ನಲ್ಲಿ ಕಡತ ವಿಲೇವಾರಿ ನಡೆಯುತ್ತಿರಲಿಲ್ಲ. ಬೇಕಾದವರ ಕಡತ ವಿಲೇವಾರಿ ಆಗುತ್ತಿವೆ ಎಂಬ ದೂರುಗಳಿದ್ದವು, ಈ ಬಗ್ಗೆ ಮುಖ್ಯಮಂತ್ರಿ ಕೂಡ ನಮಗೆ ತಾಕೀತು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯದಲ್ಲಿಯೇ ಏಜೆಂಟರ್ ಹಾವಳಿಗೂ ಬ್ರೇಕ್ ಬೀಲಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದರು.
ನಗರದ ತಹಶಿಲ್ದಾರ ಕಚೇರಿಯಲ್ಲಿ ಪರಿಶೀಲನೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲೆಲ್ಲಿ ಏಜೆಂಟ್ ಹಾವಳಿ ಇದೆ ಅಂತಾ ನಾವು ಪರಿಶೀಲನೆ ಮಾಡ್ತಾ ಇದ್ದೇವಿ. ಯಾವ ಯಾವ ಅಧಿಕಾರಿಗಳ ಹತ್ತಿರ ಕಡತಗಳು ಎಷ್ಟು ದಿನಗಳು ಇರುತ್ತವೆ ಅನ್ನೋದನ್ನು ತಹಶೀಲ್ದಾರ್ ಗೆ ತಿಳಿಯುವಂತೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ನಾನು ಇಲ್ಲಿ ಬಂದು ನಿಂತು ಏಜೆಂಟ್ ಹಾವಳಿ ತಪ್ಪಿಸಲು ಆಗಲ್ಲ. ಆದ್ರೆ ಅದಾಗದಂತೆ ಡಿಜಿಟಲೀಕರಣ ಮಾಡ್ತಾ ಇದ್ದೀವಿ ಎಂದರು. ಈಗ ಸಂಪೂರ್ಣ ಆನ್ಸೆನ್ ಮೂಲಕ ಕಡತ ವಿಲೇವಾರಿ ನಡೆಯಿತ್ತಿವೆ. ಕಾವೇರಿ 2.0 ನೋಂದಣಿ ಬಗ್ಗೆ ಕೂಡ ದೂರುಗಳು ಬಂದಿವೆ. ಈಗ ಜೆ ಸ್ಲಿಮ್ ನಿಂದ ಆಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಆಗ್ತಿಲ್ಲ. ಸರ್ವರ್ ಸಮಸ್ಯೆ ಕೂಡ ಕಾವೇರಿ 2.0 ನೋಂದಣಿಗೆ ಆಗುತ್ತಿಲ್ಲ. ಈ ಹಿಂದೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು, ಈಗ 15 ನಿಮಿಷದಲ್ಲಿ ಕೆಲಸವಾಗುತ್ತಿದೆ. ಈ ಹಿಂದೆ ಮಾರಾಟ ಭೂದಾಖಲೆಗಳು, ದಾಖಲೆಗಳ ತಿದ್ದುಪಡಿ, ಮಿಸ್ಸಿಂಗ್ ಸೇರಿ ಹಲವು ಸಮಸ್ಯೆ ಆಗಿದ್ದವು. ಈಗಾಗಲೇ ಸ್ಕ್ಯಾನರ್, ಕಂಪ್ಯೂಟರ್ ಬಂದಿದೆ, ಕೆಲಸ ಆರಂಭ ಆಗುತ್ತದೆ. ಇನ್ನೂ ಭೂ ಸುರಕ್ಷಾ ಕಾರ್ಯಕ್ರಮ ಹಿನ್ನೆಲೆ 31 ಜಿಲ್ಲೆಯ ಒಂದು ತಾಲೂಕಿಗೆ ಕೊಡಲಾಗುತ್ತೆ. ಹುಬ್ಬಳ್ಳಿಯಲ್ಲಿ ಇನ್ನು ಎರಡು ದಿನಗಳಲ್ಲಿ ಆರಂಭ ಆಗುತ್ತೆ. ತಹಶೀಲ್ದಾರ್, ಸರ್ವೇ, ಸಬ್ ರಿಜಿಸ್ಟರ್ ಇಲಾಖೆಗಳ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡಲಾಗುತ್ತದೆ.