ಬೆಂಗಳೂರು : ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ, ಹಾಲಿ ಸಚಿವ ಕೆ.ಜೆ. ಜಾರ್ಜ್​​ ವಿರುದ್ಧ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನ ಅರೆಸ್ಟ್ ಮಾಡಲಾಗಿದೆ.

ಕರ್ನಾಟಕ ವಿದ್ಯುತ್​​​​ ಪರಿಸ್ಥಿತಿ ಮತ್ತು ಗೃಹಜ್ಯೋತಿ ಬಗ್ಗೆ ನಕಲಿ ಆಡಿಯೋ ಕ್ಲಿಪ್​​ಯೊಂದನ್ನು ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನ ಪೂರ್ವ ವಿಭಾಗದ ಸೈಬರ್​​ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣದ ಕರೀಂನಗರದ ನಿವಾಸಿ ರವಿಕಾಂತ್​ ಶರ್ಮಾ (33) ಬಂಧಿತ ಆರೋಪಿಯಾಗಿದ್ದು, ಬಿಎಸ್​​ಆರ್​​ ಪಾರ್ಟಿಯ ಐಟಿ ಸೆಲ್​​ನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅವರ ತಂದೆ ತಾಯಿ ಕೂಡ ಮಾಜಿ ಕಾರ್ಪೋರೆಟರ್ ಗಳು ಅನ್ನೋ ಮಾಹಿತಿ ಸಿಕ್ಕಿದ್ದು ಆರೋಪಿಯನ್ನ ಬಂಧಿಸಿ ಸೈಬರ್ ಕ್ರೈಮ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights