#Exclusive NewsTop Newsಫ್ರೀಡಂ ಟಿವಿ ವಿಶೇಷರಾಜ್ಯವಿಶೇಷವೈರಲ್ ನ್ಯೂಸ್ಸುದ್ದಿ

ಶಿಕ್ಷಣಕ್ಕಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ಸಾವು!

ಚೆನ್ನೈ: ಶಿಕ್ಷಣ ಮತ್ತು ಇತರ ದೈನಂದಿನ ಉಪಯೋಗಕ್ಕಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಜೆ ಪವಿತ್ರನ್.  ದಿನನಿತ್ಯ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸಿತ್ತಿದ್ದ. ಸೆ.11 ರಂದು ನಿಗದಿಪಡಿಸದ್ದ ವಸ್ತುವನ್ನು ವಿತರಿಸಲು ತೆರಳಿದ್ದ. ಆದರೆ ಕೆಲವು ತಾಂತ್ರಿಕ ಕಾರಣಗಳ ಜೊತೆಗೆ ಗ್ರಾಹಕರ ಸ್ಥಳ ಪತ್ತಿ ಹಚ್ಚುವಲ್ಲಿ ವಿಫಲನಾಗಿದ್ದ ಎನ್ನಲಾಗಿದೆ. ಇದರ ನಡುವೆ ಡೆಲಿವರಿ ವಿಳಂಬದ ಕುರಿತು ಗ್ರಾಹಕಿ ಮತ್ತು ಪವಿತ್ರನ್ ನಡುವೆ ವಾಗ್ವಾದ ನಡೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.ಡೆಲಿವರಿ ವಿಳಂಬದ ಕುರಿತು ಪವಿತ್ರನ್ ಮತ್ತು ಇಬ್ಬರು ಮಹಿಳೆಯರ ನಡುವೆ ವಾದ ವಿವಾದ ನಡೆದಿದ್ದು, ನಂತರ ಮಹಿಳೆ ಡೆಲಿವರಿ ಫ್ಲಾಟ್ಫಾರ್ಮ್ನಲ್ಲಿ ದೂರು ದಾಖಲಿಸಲಾಗುತ್ತು. ಭವಿಷ್ಯದಲ್ಲಿ ಕಂಪನಿಯು ಆ ಮಹಿಳೆಗೆ ಯಾವುದೇ ಡೆಲಿವರಿಯನ್ನು ಪವಿತ್ರನ್ಗೆ ವಹಿಸುವುದಿಲ್ಲ ಎಂದು ತಿಳಿಸಿತ್ತು.ಗ್ರಾಹಕಿಯ ಬೈಗುಳದಿಂದ ತೀವ್ರವಾಗಿ ನೊಂದುಕೊಂಡಿದ್ದ ಪವಿತ್ರನ್ ಘಟನೆಯಿಂದ ಹೊರಬರದೆ, ಆಕ್ರೋಶ ತೀರಿಸಲು ಮುಂದಾಗಿ ಮಹಿಳೆಯ ಮನೆ ಮೇಲೆ ಕಲ್ಲು ತೂರಿದ್ದಾನೆ. ಕಲ್ಲು ತೂರಾಟದ ಕುರಿತು ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ ನಂತರ ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆರೋಪಿ ಪವಿತ್ರನ್ನು ಠಾಣೆಗೆ ಕರೆದು ವಾರ್ನಿಂಗ್ ಮಾಡಿದ್ದಾರೆ. ವಿದ್ಯಾರ್ಥಿ ಆಗಿದ್ದ ಕಾರಣ ಪೊಲೀಸರು ವಾರ್ನಿಂಗ್ ನೀಡಿ ಬಿಟ್ಟು ಕಳುಹಿಸಿದ್ದಾರೆ.ಘಟನೆಗಳಿಂದ ವಿದ್ಯಾರ್ಥಿ ತೀವ್ರವಾಗಿ ನೊಂದಿದ್ದ ಪವಿತ್ರನ್, ಅತ್ತ ಕಾಲೇಜಿಗೂ ತೆರಳುತಿರಲಿಲ್ಲ ಇತ್ತ ಡೆಲಿವರಿ ಕೆಲಸಕ್ಕೂ ಹಾಜರಾಗಿಲ್ಲ ಎನ್ನಲಾಗಿದೆ. ಕೊನೆಗೆ ಪವಿತ್ರನ್ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ದೂರಿನ ಕುರಿತು ಕಂಪನಿ ಯಾವುದಾದರು ಕ್ರಮ ಕೈಗೊಂಡಿತ್ತಾ ಎನ್ನುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

 

 

Comments (0)

Your email address will not be published. Required fields are marked *

Back to top button