Thursday, November 20, 2025
27.5 C
Bengaluru
Google search engine
LIVE
ಮನೆ#Exclusive Newsಶಾಸಕ ಮುನಿರತ್ನ ಡಿಎನ್‌ಎ ಪರೀಕ್ಷೆ ಕುರಿತ ಅರ್ಜಿ ವಿಚಾರಣೆ ಅ. 8ಕ್ಕೆ ಮುಂದೂಡಿಕೆ!

ಶಾಸಕ ಮುನಿರತ್ನ ಡಿಎನ್‌ಎ ಪರೀಕ್ಷೆ ಕುರಿತ ಅರ್ಜಿ ವಿಚಾರಣೆ ಅ. 8ಕ್ಕೆ ಮುಂದೂಡಿಕೆ!

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಎಸ್‌ಐಟಿ ಕಸ್ಟಡಿಯಲ್ಲಿರುವ ಆರ್.ಆರ್.ನಗರ ಶಾಸಕ ಮುನಿರತ್ನ ಡಿಎನ್‌ಎ ಪರೀಕ್ಷೆ ಕುರಿತ ಅರ್ಜಿ ಹಾಗೂ ಜಾಮೀನು ಅರ್ಜಿ ವಿಚಾರಣೆಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅ. 8ಕ್ಕೆ ಮುಂದೂಡಿದೆ. ಈ ಮಧ್ಯೆ ಶನಿವಾರ ಮುನಿರತ್ನ ಎಸ್‌ಐಟಿ ಕಸ್ಟಡಿ ಅಂತ್ಯಗೊಂಡಿದ್ದು, ಮತ್ತೂಮ್ಮೆ ಆರೋಪಿಯನ್ನು ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

42 ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮುನಿರತ್ನ ಡಿಎನ್‌ಎ ಪರೀಕ್ಷೆ ಕುರಿತು ಶುಕ್ರವಾರ ವಿಚಾರಣೆ ನಡೆಯಿತು. ಈ ವೇಳೆ ಆರೋಪಿ ಪರ ವಕೀಲ ಬಸವರಾಜು, ಡಿಎನ್‌ಎ ಟೆಸ್ಟ್‌ಗೆ ಮುನಿರತ್ನ ರಕ್ತ ಮಾದರಿ ತೆಗೆದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ನ್ಯಾಯಾಧೀಶರು, ಎಸ್‌ಐಟಿಗೆ ಸ್ಟೇಷನ್ ಪವ‌ರ್ ಇಲ್ಲವೇ, ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಎಸ್‌ಪಿಪಿಗೆ ಪ್ರಶ್ನಿಸಿದರು. ಆಗ ಎಸ್‌ಪಿಪಿ ಪ್ರದೀಪ್, ಮಂಗಳವಾರ ಸ್ಪಷ್ಟಿಕರಣ ನೀಡುವುದಾಗಿ ಕಾಲಾವಕಾಶ  ಕೋರಿದರು. ಅದಕ್ಕೆ ಸಮ್ಮತಿಸಿದ ಕೋರ್ಟ್ಇನ್ನು 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದ ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯನ್ನೂ ಕೋರ್ಟ್ ಮಂಗಳವಾರಕ್ಕೆ ಮುಂದೂಡಿತು.
 

ಎಚ್‌ಐವಿ ಸೋಂಕಿತೆ ಬಗ್ಗೆ ಕೋರ್ಟ್‌ಗೆ ಮಾಹಿತಿ

ಮತ್ತೊಂದೆಡೆಗೆ ಅತ್ಯಾಚಾರ ಸಂತ್ರಸ್ತೆ ದೂರಿನಲ್ಲಿ ಮುನಿರತ್ನ ಎಚ್‌ಐವಿ ಟ್ರ್ಯಾಪ್ ಬಗ್ಗೆ ಪ್ರಸ್ತಾವಿಸಿದ್ದಾರೆ. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದ ಎಚ್‌ಐವಿ ಸೋಂಕಿತೆಯನ್ನು ಪತ್ತೆ ಹಚ್ಚಿದ್ದಾರೆ. ಈಕೆಯನ್ನು ಶೀಘ್ರದಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬಳಿಕ ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಆರೋಪಿ ಮುನಿರತ್ನನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿ, ಆರೋಪಿಯನ್ನು ಮತ್ತೆ ಕಸ್ಟಡಿಗೆ ಕೇಳಲಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments