#Exclusive NewsTop Newsಉಪ ಚುನಾವಣೆರಾಜಕೀಯರಾಜ್ಯಸುದ್ದಿ

ಶಾಲೆಗಳ ಕಟ್ಟಡಕ್ಕೆ 25 ಎಕರೆ ಭೂಮಿ ದಾನ ಮಾಡಿದ್ದೇನೆ ; ಡಿ.ಕೆ.ಶಿವಕುಮಾರ್​

ಚನ್ನಪಟ್ಟಣ: ಶಾಲೆಗಳ ನಿರ್ಮಾಣಕ್ಕೆ ಕನಕಪುರದಾದ್ಯಂತ 25 ಎಕರೆ ಭೂಮಿಯನ್ನು ದಾನ ಮಾಡಿದ್ದೇನೆ ದೇವೇಗೌಡರ ಕುಟುಂಬ ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟಾ ಭೂಮಿಯನ್ನಾದರೂ ಕೊಟ್ಟಿದೆಯೇ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿಯವರು ತಮ್ಮ ಪ್ರಚಾರದ ವೇಳೆ ಡಿಕೆ.ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿದ್ದಾರೆ. ಕನಕಪುರದಲ್ಲಿ ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು. ನಾನು ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ನಡೆಸಿದ ಬಳಿಕ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿದರು. ಆದೇ ಕೆಲಸವನ್ನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಯೋಗೇಶ್ವರ್ ಅವರು 4-5 ಕೋಟಿ ರೂಪಾಯಿ ಖರ್ಚು ಮಾಡುವುದರ ಮೂಲಕ ಬಿಸಿಲಮ್ಮ ಮತ್ತು ಮಹದೇಶ್ವರ ದೇವಸ್ಥಾನಗಳನ್ನು ಪರಿವರ್ತಿಸಿದ್ದಾರೆ. ಕುಮಾರಸ್ವಾಮಿ ಅವರು ರಾಮನಗರ ಅಥವಾ ಚನ್ನಪಟ್ಟಣದಲ್ಲಿ ಒಂದೇ ಒಂದು ದೇವಸ್ಥಾನವನ್ನಾದರೂ ಅಭಿವೃದ್ಧಿಪಡಿಸಿದ್ದಾರೆಯೇ? ಜನರಿಗೆ ಒಂದೇ ಒಂದು ಕುಡಿಯುವ ನೀರಿನ ಸೌಲಭ್ಯವನ್ನಾದರೂ ಒದಗಿಸಿದ್ದಾರೆಯೇ?…

Comments (0)

Your email address will not be published. Required fields are marked *

Back to top button