ರಾಜ್ಯಸಿನಿಮಾ

ವಿಷ್ಣು ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಸತೀಶ್​ ನೀನಾಸಂ ಬೆಂಬಲ

ನಟ ಸಹಾಸ ಸಿಂಹ ವಿಷ್ಣುವರ್ಧನ್​ ಸಮಾಧಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಸತೀಶ್ನೀನಾಸಂ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ವಿಷ್ಣು ಸಮಾಧಿಗಾಗಿ ಹೋರಾಟ ಮಾಡಬೇಕಾಗಿರುವುದು ಬೇಸರದ ವಿಷಯ. ಇದು ಬರೀ ಸಮಾಧಿಯ ವಿಷಯವಲ್ಲ ಅಭಿಮಾನಿಗಳಿಗಾಗುವ ನೋವು. ಬೇಗ ಇದನ್ನು ಸರ್ಕಾರ ಬಗೆಹರಿಸಲಿ, ಅಭಿಮಾನಿಗಳ ಹೋರಾಟದ ಜೊತೆ ನಾವಿದ್ದೇವೆ ಎಂದು ನಟ ಸತೀಶ್​ ನೀನಾಸಂ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button