ವಾಲ್ಮೀಕಿ ನಿಗಮದ ಹಗರಣ ಇದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವನ್ನು ಒಳಗೊಂಡ ಹಣಕಾಸು ವಂಚನೆಯ ಪ್ರಕರಣವಾಗಿದೆ. ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ ಆತ್ಮಹತ್ಯೆಯ ನಂತರ ಹಗರಣವು ಬೆಳಕಿಗೆ ಬಂದಿದೆ.ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ, ಆರ್ಥಿಕ ಇಲಾಖೆಯು ತಾಂತ್ರಿಕ ಕಾರಣಗಳನ್ನು ಮುಂದಿನ ನಿಗಮದ ಗಂಗಾಕಲ್ಯಾಣ ಯೋಜನೆ ಅನುದಾನವನ್ನು ತಡೆ ಹಿಡಿದಿದ್ದಲ್ಲದೆ, ಹಗರಣಕ್ಕೆ ಮೂಲವಾಗಿರುವ 43.33 ಕೋಟಿ ರೂ.ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ನಿಗಮದ 89.64 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ವಹಿವಾಟಿನ ಇಂಚಿಂಚೂ ಶೋಧಿಸಿರುವ ಇಡಿ ಅಧಿಕಾರಿಗಳು, ಹಗರಣಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆ ಲೋಪಗಳನ್ನು ಪಟ್ಟಿ ಮಾಡಿದೆ. ಈ ವರ್ಷದ ಜನವರಿಯಲ್ಲಿ ತರಾತುರಿಯಲ್ಲಿ ಅನುದಾನ ಬಿಡುಗಡೆ ಮಾಡಿದ್ದು, ಇದೇ ಅನುದಾನ ಅನ್ಯರ ಪಾಲಾಗಿತ್ತು ಎಂಬುದನ್ನು ಬೊಟ್ಟು ಮಾಡಿ ತೋರಿಸಿದೆ.ಪರಿಶಿಷ್ಟರ ಪಂಗಡದ ಕಲ್ಯಾಣಕ್ಕಾಗಿ ‘ಗಂಗಾಕಲ್ಯಾಣ’, ಸ್ವಯಂ ಉದ್ಯೋಗಶೀಲತೆ ಹಾಗೂ ಸಣ್ಣ ಸಾಲ ನೆರವು ಸೇರಿದಂತೆ ಹಲವು ಯೋಜನೆಗಳು ನಿಗಮದಿಂದ ಜಾರಿ ಮಾಡಲಾಗಿದೆ. 2023-24ನೇ ಸಾಲಿನಲ್ಲಿ ಗಂಗಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಮಂಜೂರಾಗಿದ್ದ ಅನುದಾನವನ್ನೂ ನಿಗಮದ ಅಧಿಕಾರಿಗಳು ಫಲಾನುಭವಿಗಳಿಗೆ ನೀಡಿರಲಿಲ್ಲ, ಆದರೆ, ತ್ರೈಮಾಸಿಕ ಕಂತಿನ 21.66 ಕೋಟಿ ರೂ.ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದರು.
21.66 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು 2023ರ ಡಿಸೆಂಬರ್ನ ನಲ್ಲಿ ಸ್ಪಷ್ಟವಾಗಿ ನಿರಾಕರಿಸಿದ್ದ ಆರ್ಥಿಕ ಇಲಾಖೆ, ”ಈ ಹಿಂದೆ ನೀಡಿದ್ದ ಅನುದಾನ ಶೇ.75 ರಷ್ಟು ಬಳಕೆ ಮಾಡಿಲ್ಲ, ಜತೆಗೆ, ಅನುದಾನ ಬಳಕೆ ಕುರಿತು ‘ಯುಟಿಲೈಸೆಷನ್ ಸರ್ಟಿಫಿಕೇಟ್’ ಸಲ್ಲಿಕೆ ಮಾಡಿಲ್ಲ.” ಎಂಬ ಕಾರಣ ನೀಡಿತ್ತು.
ಅನಧಿಕೃತವಾಗಿ ಬ್ಯಾಂಕ್ ಖಾತೆ!: ವಾಲ್ಮೀಕಿ ಅಭಿವೃದ್ಧಿ ನಿಗಮ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಸೇರಿದಂತೆ ಇತರೆಡೆ ಐದು ಬ್ಯಾಂಕ್ ಖಾತೆಗಳನ್ನು ಅನಧಿ ಕೃತವಾಗಿ ತೆರೆಯಲಾಗಿತ್ತು ಎಂಬ ವಿಚಾರವೂ ಇಡಿ ತನಿಖೆಯಲ್ಲಿ ಬಯಲಾಗಿದೆ. ಈ ಕುರಿತು ಆಗಸ್ಟ್ 18ರಂದು ನಡೆದ ಇಡಿ ವಿಚಾರಣೆಯಲ್ಲಿ ನಿಗಮದ ಜನರಲ್ ಮ್ಯಾನೇಜರ್ ಎ.ರಾಜಶೇಖರ ಹೇಳಿಕೆ ದಾಖಲಿಸಿದ್ದಾರೆ.ನಿಗಮದ ಹೆಸರಿನಲ್ಲಿ ಹೊಸ ಬ್ಯಾಂಕ್ ಖಾತೆ ತೆರೆಯ ಬೇಕಾದರೆ ಸರಕಾರ ಅಥವಾ ನಿಗಮ ಮಂಡಳಿ ಸಭೆಯಲ್ಲಿ ಅನುಮತಿ ಪಡೆಯಬೇಕು. ಆದರೆ, ಅನುಮತಿ ಪಡೆಯದೆ ಮಾಜಿ ಎಂ.ಡಿ ಪದ್ಮನಾಭ ಅನಧಿಕೃತ ಖಾತೆಗಳನ್ನು ತೆರೆದಿ ದ್ದರು. ವಸಂತನಗರದ ಶಾಖೆಯಲ್ಲಿದ್ದ ನಿಗಮದ ಖಾತೆ ಯನ್ನು ಅನಧಿಕೃತವಾಗಿ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಗೆ ವರ್ಗಾಯಿಸಿ ಖಾತೆ ತೆರೆದಿದ್ದರು ಎಂದು ರಾಜಶೇಖರ ಹೇಳಿಕೆ ದಾಖಲಿಸಿದ್ದಾರೆ. ಇದೇ ಖಾತೆ ಯಲ್ಲಿದ್ದ 94 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಯಾಗಿ, ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ಮಧ್ಯವರ್ತಿಗಳ ಪಾಲಾಗಿದೆ ಎಂದು ಇ.ಡಿ ಹೇಳಿದೆ.