ಲೋಕಾಯುಕ್ತ ಸಂಸ್ಥೆಗೆ ತೆರಳಲು ಇನ್ಸ್ಪೆಕ್ಟರ್ಸ್ ಹಿಂದೇಟು…!!!

ಬೆಂಗಳೂರು : ಕಳೆದ ಬಾರಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದಂತಹ ಸಂದರ್ಭದಲ್ಲಿ ಅನೇಕರು ತಮ್ಮ ಸ್ಥಳಕ್ಕೆ 40 ದಿನಗಳಾದ್ರೂ ವರದಿ ಮಾಡಿಕೊಂಡಿಲ್ಲ. ಅದರಂತೆ ಈ ವರ್ಗಾವಣೆ ಆದೇಶದಲ್ಲಿ ಸುಮಾರು 15 ಜನ ಇನ್ಸ್ಪೆಕ್ಟರ್ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆದರೂ ಈವರೆಗೂ ಕೂಡ ವರದಿ ಮಾಡಿಕೊಂಡಿಲ್ಲ.

ಡಿಜಿ-ಐಜಿಪಿ ನೋಟಿಸ್ಗೂ ನೋ ಕೇರ್..!
ಲೋಕಾಯುಕ್ತ ಸಂಸ್ಥೆ ಕಳೆದ ಎರಡು ವರ್ಷಗಳ ಹಿಂದೆ ಮತ್ತೆ ತನ್ನ ಪವರ್ ಪಡೆದುಕೊಂಡಿತ್ತು. ಎಸಿಬಿಯನ್ನ ಸಂಪೂರ್ಣವಾಗಿ ನಿಷ್ಕ್ರೀಯಗೊಳಿಸಿ ಲೋಕಾಯುಕ್ತಕ್ಕೆ ಹೆಚ್ಚಿನ ಪವರ್ ನೀಡಲು ಅಂದಿನ ಬಿಜೆಪಿ ಸರ್ಕಾರ ನಿರ್ಧಾರ ಮಾಡಿತ್ತು. ಲೋಕಾಯುಕ್ತ ಬಲವನ್ನ ಇನ್ನಷ್ಟು ಇಮ್ಮಡಿಗೊಳಿಸಲು ಕಳೆದ ತಿಂಗಳು ಇನ್ಸ್ಪೆಕ್ಟರ್ಗಳನ್ನ ವರ್ಗಾವಣೆ ಮಾಡಿತ್ತು. ಆದರೆ ಈವರೆಗೂ ಕೂಡ ವರ್ಗಾವಣೆಗೊಂಡ ಒರ್ವ ಇನ್ಸ್ಪೆಕ್ಟರ್ ಕೂಡ ಕರ್ತವ್ಯಕ್ಕೆ ಹಾಜರಾಗದೇ ಇರೋದು ಲೋಕಾಯುಕ್ತಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ..
ಲೋಕಾಯುಕ್ತದಲ್ಲಿ ಹೆಚ್ಚಿದ ಕಾರ್ಯಾಭಾರ..!
ಕರ್ನಾಟಕದಲ್ಲಿ ಎಸಿಬಿ ಬಂದ್ ಮಾಡಿ ಲೋಕಾಯುಕ್ತ ರಚನೆ ಆದ ಬಳಿಕ ಹಲವು ಕೇಸ್ಗಳು ದಾಖಲಾದವು, ಪ್ರತಿದಿನ ದೂರುಗಳ ಸಂಖ್ಯೆಯು ಕೂಡ ಹೆಚ್ಚಾಗ ತೊಡಗಿತು. ಇದರಿಂದ ಟ್ರಾನ್ಸ್ಫಾರ್ ಆದಂತಹ ಇನ್ಸ್ಪೆಕ್ಟರ್ಗಳು ಕರ್ತವ್ಯಕ್ಕೆ ಹಾಜರಾದ್ರೆ ಲೋಕಾಯುಕ್ತಕ್ಕೆ ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ ಅನ್ನೋ ದೃಷ್ಠಿಯಲ್ಲಿ ಈ ವರ್ಗಾವಣೆ ಮಾಡಲಾಗಿತ್ತು. ಯಾವೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ಕರ್ತವ್ಯಕ್ಕೆ ಹಾಜರಾಗದೇ ಇರೋದು ಸರ್ಕಾರಕ್ಕೆ ನಿಜವಾಗಿಯೂ ದೊಡ್ಡ ಸವಾಲಾಗಿದೆ.




