ಬೆಳಗಾವಿ:ನಿಪ್ಪಾಣಿ ರಾಮಮಂದಿರದ ಒಂದೇ ಒಂದು ಕಲ್ಲನ್ನು ಕೂಡ ಅಲುಗಾಡಿಸಲು ಆಗಲ್ಲ. ನಿಮಗೆ ತಾಕತ್ತಿದ್ದರೆ ಮುಟ್ಟಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.
ರಾಮ ಮಂದಿರ ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಪತ್ರ ಬರೆಯಲಾಗಿದೆ. ಈ ರೀತಿಯ ಬೆದರಿಕೆಯನ್ನು ಹಿಂದೂ ಸಮಾಜ ಸಹಿಸಲ್ಲ, ಹೆದರುವುದೂ ಇಲ್ಲ. ಈಗ ಘಜನಿ, ಘೋರಿ ಬಾಬಾ ಇಲ್ಲ. ಇಲ್ಲಿ ಇರೋದು ಭಾರತೀಯ ಮುಸ್ಲಿಮರು ಅನ್ನೋದು ನೆನಪಿರಲಿ. ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಪೂಜಿಸಬೇಕು ಅಂತೇನಿಲ್ಲ, ಗೌರವಿಸಬೇಕು
ರಾಮಮಂದಿರ ಮುಟ್ಟಿದ್ರೆ ಮುಂದಿನ ಸ್ಥಿತಿ ಏನಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಲ್ಲ ರಾಮ ಮಂದಿರಗಳಿಗೂ ಸರ್ಕಾರ ಭದ್ರತೆ ಕೊಡಬೇಕು ಎಂದು ಮುತಾಲಿಕ್ ಆಗ್ರಹಿಸಿದರ