ಕ್ರೈಂ ಸ್ಟೋರಿಮನರಂಜನೆ
ರಾಕ್ಲೈನ್ ವೆಂಕಟೇಶ್ ಸಹೋದರನ ಮನೆ ದರೋಡೆ

ಸ್ಕೇಚ್ ಹಾಕಿ ದರೋಡೆ ಮಾಡಿದ ಗ್ಯಾಂಗ್ ಅಂದರ್
ಬೆಂಗಳೂರು:- ಸ್ಯಾಂಡಲ್ ವುಡ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹೋದರನ ಮನೆ ಕಳ್ಳತನ ಮಾಡಿದ ನೇಪಾಳಿ ಗ್ಯಾಂಗ್ ಅನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಅವರು ಕುಟುಂಬ ಸಮೇತ ಯುರೋಪ್ ಪ್ರವಾಸ ಹೋಗಿದ್ದ ವೇಳೆ ಮನೆ ಕಳ್ಳತನವಾಗಿದೆ.

ಈ ಸಂಬಂಧ 7 ಆರೋಪಿಗಳ ತಂಡವನ್ನ ಬಂಧಿಸಿದ್ದು, ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಭ್ರಮರೇಶ್ ಅವರ ಮನೆ ಪಕ್ಕ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕುಳಿತುಕೊಂಡು ದರೋಡೆ ಮಾಡಲು ನೇಪಾಳಿ ಗ್ಯಾಂಗ್ ಮೂರು ತಿಂಗಳುಗಳ ಕಾಲ ಪ್ಲ್ಯಾನ್ ಮಾಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ.




