ಬೆಂಗಳೂರು : ಮೆಟ್ರೋ ದರವನ್ನು ಶೇ.70ರಷ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಬಿಎಂಆರ್‌ಸಿಎಲ್ ಈಗ ತನ್ನ ವ್ಯಾಪ್ತಿಯ ಶೌಚಾಲಯ ಬಳಕೆಗೂ ದರ ನಿಗದಿ ಮಾಡಿದೆ.
ಬಿಎಂಆರ್ಸಿಎಲ್ನ ನಡೆಯನ್ನು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಬಿಎಂಆರ್‌ಸಿಎಲ್ ತನ್ನ ವ್ಯಾಪ್ತಿಯ ಶೌಚಾಲಯಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಆ ಸಂಸ್ಥೆಯೇ ಮೆಟ್ರೋ ನಿಲ್ದಾಣಗಳ ಶೌಚಾಲಯಗಳನ್ನು ನಿರ್ವಹಣೆ ಮಾಡಲಿದೆ. ಇದಕ್ಕಾಗಿ ಶೌಚಾಲಯ ಬಳಕೆಗೆ ಶುಲ್ಕ ನಿಗದಿಸಿದ್ದು, ಮೂತ್ರ ವಿಸರ್ಜನೆಗೆ ರೂ2, ಮಲ ವಿಸರ್ಜನೆಗೆ ರೂ.5 ನಿಗದಿ ಪಡಿಸಲಾಗಿದೆ.
ನ್ಯಾಷನಲ್ ಕಾಲೇಜು, ಲಾಲ್ಬಾಗ್, ಸೌಂಥ್ ಎಂಡ್ ಸರ್ಕಲ್,ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್, ಮೆಜೆಸ್ಟಿಕ್, ಬನಶಂಕರಿ, ಜೆ.ಪಿ. ನಗರ, ಯಲಚೇನಹಳ್ಳಿ, ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣಗಳಲ್ಲಿನ ಶೌಚಾಲಯಗಳ ಬಳಕೆಗೂ ಮುನ್ನ ಪಾವತಿ ಮಾಡಬೇಕಾಗುತ್ತದೆ.
ಮೆಟ್ರೋ ವ್ಯಾಪ್ತಿಯ 12 ಶೌಚಾಲಯಗಳಲ್ಲಿ ಬಳಕೆಗೆ ಶಲ್ಕ ನಿಗದಿ ಮಾಡಿದ್ದಾರೆ.ನಮ್ಮ ಮೆಟ್ರೋ ಆರಂಭವಾದಾಗಿನಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯ ಇತ್ತು. ಆದ್ರೆ ಈಗ ಏಕಾಏಕಿ ಶುಲ್ಕ ನಿಗದಿ ಮಾಡಿದ್ದಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.


