ರಾಜಕೀಯರಾಜ್ಯ

ಮೆಟ್ರೋ ದರ ಇಳಿಕೆ ಬಗ್ಗೆ ಏನಂದ್ರು ಡಿಕೆಶಿ?

ಮೆಟ್ರೋ ದರ ಇಳಿಸಬೇಕು ಅನ್ನೋ ನಮ್ಮ ಸರ್ಕಾರದ ಅಭಿಪ್ರಾಯವನ್ನು ಬಿಎಮ್ ಆರ್ ಸಿಎಲ್ ಗೆ ತಿಳಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.


ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮೆಟ್ರೋ ದರ ಇಳಿಕೆಗೆ ದರ ಕಡಿಮೆ ಮಾಡಬೇಕನ್ನೋದು ನಮ್ಮ ಆಶಯ. ಈ ಬಗ್ಗೆ ಬಿಎಂಆರ್ಸಿಎಲ್ ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಅಂತೀಮವಾಗಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಜನರ ಒತ್ತಾಯದ ಮೆರೆಗೆ ಮುಖ್ಯಮಂತ್ರಿಗಳು ದರ ಇಳಿಕೆಗೆ ಸೂಚನೆ ನೀಡಿದ್ದಾರೆ. ಆದರೆ ದರ ನಿಗದಿ ಮಾಡುವ ರಾಜ್ಯ ಸರ್ಕಾರದ ಸುಪರ್ಧಿಗೆ ಬರುವುದಿಲ್ಲ, ಕೇಂದ್ರ ಸರ್ಕಾರದವರು ದರ ನಿಗದಿಗೆ ನ್ಯಾಯಾಧೀಶರ ನೇತೃತ್ವದ ಪ್ರತ್ಯೇಕ ಸಮೀತಿ ರಚಿಸಲಾಗಿದೆ. ಅಂತಿಮವಾಗಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಿಕೆಶಿ ಹೇಳಿದರು.

Comments (0)

Your email address will not be published. Required fields are marked *

Back to top button