
ಮಹಾಶಿವರಾತ್ರಿ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ 102ವರ್ಷದ ತುಂಬು ವಯಸ್ಸಿನ ವೃದ್ಧೆ ಪಾರ್ವತಮ್ಮ ಪಾದಯಾತ್ರೆ ಮಾಡಿ ಮೊನ್ನೆಯಷ್ಟೇ ಗಮನ ಸೆಳೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶತಾಯುಷಿ ಅಜ್ಜಿಯ ವಿಡಿಯೋ ಸಖತ್ ವೈರಲ್ ಆಗಿತ್ತು.
ತಾಳಬೆಟ್ಟದಿಂದ 18 ಕಿಲೋಮೀಟರ್ ದೂರದಲ್ಲಿರುವ ಮಲೆ ಮಾದಪ್ಪನ ಬೆಟ್ಟವನ್ನು ಲೀಲಾಜಾಲವಾಗಿ ಹತ್ತಿದ್ದ 102 ವರ್ಷದ ಪಾರ್ವತಮ್ಮ ಅಜ್ಜಿ ಶಿವರಾತ್ರಿ ದಿನವಾದ ಶುಕ್ರವಾರ ಮಲೆ ಮಾದಪ್ಪನ ದರ್ಶನ ಪಡೆದು ಪುನೀತರಾಗಿದ್ದರು
ಇದೇ ಸಂದರ್ಭದಲ್ಲಿ ತಿಪಟೂರು ಮೂಲದ ಪಾರ್ವತಮ್ಮ ಅಜ್ಜಿಯನ್ನು ಮಲೆ ಮಹದೇಶ್ವರಬೆಟ್ಟದಲ್ಲಿರುವ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮೀಜಿಗಳು ಸನ್ಮಾನ ಮಾಡಿ ಗೌರವಿಸಿದ್ದಾರೆ.

ಇದನ್ನು ನೋಡಿ




