ಈ ಫೋಟೋದಲ್ಲಿರುವ ಖದೀಮನನ್ನ ಒಮ್ಮೆ ನೋಡಿ. ಈತ ಮೋಸ ಮಾಡಿರುವುದು ಒಬ್ಬರಿಗಲ್ಲ..ಇಬ್ಬರಿಗಲ್ಲ ಬರೋಬ್ಬರಿ 259 ಮಹಿಳೆಯರು ಯುವತಿಯರಿಗೆ ಯಾಮಾರಿಸಿದ್ದಾನೆ. ತಾನು ಕಸ್ಟಮ್ಸ್ ಅಧಿಕಾರಿಗೆ ಎಂದು ಬುರುಡೆ ಬಿಟ್ಟು ನಂಬಿಸಿ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಪ್ರೋಫೈಲ್ ಅಪ್ ಲೋಡ್ ಮಾಡಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನ ಇದೀಗ ಬೆಂಗಳೂರು ರೈಲ್ವೆ ಪೊಲೀಸ್ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ ಸೆಟ್ ಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ವಿಧವೆ, ವಿಚ್ವೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ.
ಅಂದಾಗೆ ಈ ಖದೀಮನ ಹೆಸರು ನರೇಶ್ ಪುರಿ ಗೋಸ್ವಾಮಿ. ತೀರಾ ಇತ್ತೀಚೆಗೆ ಕೊಯಮತ್ತೂರು ಮೂಲದ ಮಹಿಳೆಯೊಬ್ಬರನ್ನ ಮದುವೆಯಾಗುವುದಾಗಿ ನಂಬಿಸಿ ಮಾತುಕತೆಗೆ ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿರುವುದರಿಂದ ಪರ್ಸ್ ಮನೆಯಲ್ಲಿಯೇ ಬಿಟ್ಟು ಬಂದಿದ್ದಾಗಿ ತಿಳಿಸಿ ಹಣ ಪಡೆಯುತ್ತಿದ್ದ. ಇನ್ನು ವಂಚನೆಗೆ ಎರಡು ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡಿಕೊಂಡು ಬಳಸುತ್ತಿದ್ದ.. ಕೇವಲ ಹೊರ ಹೋಗುವ ಕರೆಗಳು ಮಾತ್ರ ಆಕ್ಟೀವ್ ಆಗಿತ್ತು. ಒಳಬರುವ ಕರೆಗಳನ್ನ ನಿಷೇಧಿಸಿದ್ದ..
ಇನ್ನು ಹಿಂದಿ ಪತ್ರಿಕೆಯಲ್ಲಿ ಬರುವ ಜಾಹೀರಾತುಗಳನ್ನು ನೋಡಿ ವಧುಗಳ ಮೊಬೈಲ್ ನಂಬರ್ ಪಡೆದು ಕಾಂಟ್ಯಾಕ್ಟ್ ಮಾಡುತ್ತಿದ್ದ.. ಅಷ್ಟೆ ಅಲ್ಲದೆ ಅಗರ್ ಸೇನಾಜಿ ವೈವಾಹಿಕ ಮಂಚ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೇರಿಕೊಂಡು ಮಹಿಳೆಯರನ್ನು ಗುರುತಿಸಿ ಅವರನ್ನ ಪೋನ್ ಮೂಲಕ ಮಾತನಾಡಿಸಿ ವಂಚಿಸೋಕೆ ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದ್ದ. ಬಳಿಕ ಅವರೊಂದಿಗೆ ಸಲುಗೆ ಬೆಳೆಸಿ ಮದುವೆ ಆಗುವುದಾಗಿ ನಂಬಿಸುತ್ತಿದ್ದ.
ರಾಜಸ್ಥಾನದ 56 , ಉತ್ತರ ಪ್ರದೇಶದ 32 , ದೆಹಲಿಯ 32 , ಕರ್ನಾಟಕದ 17 ,ಮಧ್ಯಪ್ರದೇಶದ 16, ಮಹಾರಾಷ್ಟ್ರ ದ 13, ಗುಜರಾತ್ 11 ಮಹಿಳೆಯರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವನಿಂದ ವಂಚನೆಗೆ ಒಳಗಾದ ಮತ್ತಷ್ಟು ಸಂತ್ರಸ್ಥರನ್ನ ಸಂಪರ್ಕಿಸಿ ಪೊಲೀಸ್ರು ಮಾಹಿತಿ ಪಡೆಯುತ್ತಿದ್ದಾರೆ. ವಿಚಾರಣೆ ಮಾಡಿದ್ದಂತೆಲ್ಲಾ ಇವನ ವಂಚನೆಯ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಾಗಿ ಮಹಿಳೆಯರು ಮತ್ತು ಯುವತಿಯರೇ ಎಚ್ಚರ.