ಹಾವೇರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಶ್ರೀನಿವಾಸ್ ಆಲದರ್ತಿ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶ್ರೀನಿವಾಸ್ ಮನೆಯ ಮೇಲೆ ನಿನ್ನೆಯೇ ಲೋಕಾ ದಾಳಿ ನಡೆಸಿದ್ದು, ಅಧಿಕಾರಿಯ ತಾಯಿ ನಿಧನ ಹೊಂದಿದ್ದ ಹಿನ್ನೆಲೆ, ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದ್ದರು. ಇಂದು ಅಧಿಕಾರಿಯ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗಿದೆ.
ಪರಿಶಿಲನೆ ವೇಳೆ ಸುಮಾರು 14.80 ಲಕ್ಷ ರೂ ಹಣವನ್ನು ಜಪ್ತಿ ಮಾಡಲಾಗಿದೆ. 100 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಆಭರಣ ಪತ್ತೆಯಾಗಿದೆ. ಶ್ರೀವಾಸ್‌ಗೆ 1 ರಾಣೇಬೇನೂರು, 2 ಗುಲ್ಬರ್ಗಾ, 1 ಸುರಪುರ, 1 ಧಾರವಾಡ ಸೇರಿದಂತೆ ಒಟ್ಟು 5 ಸೈಟ್ ಇರುವ ಮಾಹಿತಿ ಸಿಕ್ಕಿದೆ. 1 ಐಶಾರಾಮಿ ಕಾರ್, ಮೂರು ಅಂತಸ್ತಿನ ಮನೆ ಇರುವ ಮಾಹಿತಿ ಲಭಿಸಿದೆ. ಬೆಲೆಬಾಳುವ ಐಶಾರಾಮಿ ಪೀಠೋಪಕರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಶೋಧ ಕಾರ್ಯ ಮುಂದುವರೆದಿದೆ.