ಹುಬ್ಬಳ್ಳಿ : ಬೆಳಗಾವಿಯಲ್ಲಿ ಮಹಿಳೆಯ ವಿಸೃತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಯಲ್ಲಿ ನಡೆದಂತಹ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತ ಘಟನೆ ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜಸ್ಥಾನದಲ್ಲೂ ಸಹ ಇದೇ ಪರಿಸ್ಥಿತಿ ಇತ್ತು. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಲ್ಲಿಇಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕುವ ಕೆಲಸ ಬಿಜೆಪಿಯಿಂದಲೂ ಸಹ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಸಂಸತ್ ಭವನದಲ್ಲಿ ಆಗಂತುಕರ ದಾಳಿ : ಈ ವಿಚಾರವಾಗಿ ಮಾತನಾಡಿದ್ದ ಪ್ರಹ್ಲಾದ್ ಜೋಶಿ ಅವರು, ಇದು ಕೇವಲ ತಿಳಿಗೇಡಿಗಳು ಮಾಡಿರುವಂತಹ ಘಟನೆಯಲ್ಲ. ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಮಾಡಿರೋ ಘಟನೆ. ಇದರಲ್ಲಿ ರಾಜಕೀಯ ಮಾಡಬೇಕಿಲ್ಲ, ಈ ಹಿಂದೆ ಸಾಕಷ್ಟು ಪ್ರಕರಣಗಳು ನಡೆದಿವೆ. ಪಿಸ್ತೂಲ್ ಮತ್ತು ಡ್ರ್ಯಾಗರ್ ತೆಗೆದುಕೊಂಡು ಸಹ ಸಂಸತ್ತಿಗೆ ಎಂಟ್ರಿ ನೀಡಿದ್ದರು. ಒಂದೇ ವ್ಯಕ್ತಿ ಎರಡು ದಿನ ಒಂದೇ ಪಾಸ್ ನಲ್ಲಿ ಸಂಸತ್ತಿಗೆ ಪ್ರವೇಶ ಮಾಡಿದ್ದ. ಇದಕ್ಕೆ ಯಾವ ಎಂಪಿ ಪಾಸ್ ನೀಡಿದ್ದರು ಎಂಬುದು ಸಹ ಗೊತ್ತಿದೆ ಎಂದರು. ಆದರೆ ಇದನ್ನು ನಾವು ಮಾತನಾಡಲ್ಲ ಇದು ಮೋದಿ ಸರ್ಕಾರದಲ್ಲಿ ನಡೆಯಲ್ಲಾ. ಇದನ್ನು ರಾಜಕೀಯ ಮಾಡಬಹುದು, ಕಟುವಾಗಿ ಕಾಂಗ್ರೆಸ್ ಟೀಕಿಸಬಹುದು ಆದರೆ ನಾವು ಅದನ್ನು ಮಾಡಲ್ಲ ಎಂದು ಹೇಳಿದರು.
ಇನ್ನೂ ಮುಂದೆ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮಕ್ಕೆ ಚಿಂತನೆ ನಡೆದಿದೆ. ಜೀರೋ ಭಯೋತ್ಪಾದಕತೆ ಮೋದಿ ಸರ್ಕಾರದ ನಿರ್ಧಾರವಾಗಿದೆ. ಈ ಹಿಂದಿನ ಸ್ಪಿಕರ್ ತೆಗೆದುಕೊಂಡ ಕ್ರಮಕ್ಕಿಂತ ಈಗಿನ ಸ್ಪಿಕರ್ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಈ ತರಹದ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ನಾವೆಲ್ಲರೂ ಒಟ್ಟಾಗಿ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.