ರಾಜ್ಯ

ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ : ಸತ್ಯ ಶೋಧನ ಸಮಿತಿ ರಚಿಸಿದ ಬಿಜೆಪಿ

ನವದೆಹಲಿ – ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಬೆಳಗಾವಿಯಲ್ಲಿ ವಂಟನೂರಿನಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ, ಈ ಘಟನೆ ಅತ್ಯಂತ ಹೀನಾಯ ಕೃತ್ಯವಾಗಿದೆ. ಇದರ ಕುರಿತಾಗಿ ಐವರು ಸದಸ್ಯರ ಸತ್ಯಶೋಧನ ಸಮಿತಿ ರಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

ಇನ್ನೂ ಈ ಸಮಿತಿ ಐವರು ಲೋಕಸಭಾ ಮಹಿಳಾ ಸದಸ್ಯರಿದ್ದು, ಘಟನೆ ನಡೆದ ಬೆಳಗಾವಿ ಜಿಲ್ಲೆಯ ವಂಟನೂರಿಗೆ ತೆರಳಿ ಮಾಹಿ ಕಲೆಹಾಕಲಿದ್ದಾರೆ. ವದರಿ ಸಿದ್ದಪಡಿಸಿದ ನಂತರ ಐವರು ಸದಸ್ಯರು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ಸಿಂಗ್​​ ರವರಿಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸತ್ಯಶೋಧನ ಸಮಿತಿಯಲ್ಲಿ ಸಂಸದೆಯರಾದ ಸುನೀತಾ ದುಗ್ಗಲ್, ಅರ್ಪಿತಾ ಸಾರಂಗಿ, ಲಾಕೇಟ್​​ ಚಟರ್ಜಿ, ರಂಜೀತಾ ಕೋಲಿ, ಪಕ್ಷ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button