politices
ದಾವಣಗೆರೆ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕೆ ಸಿ ಆರ್ ಪಕ್ಷದ ಅಬ್ಬರದ ನಡುವೆಯೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಇದರಲ್ಲಿ ಸಿಎಂ ರೇವಂತ್ ರೆಡ್ಡಿ ಅವರ ಪಾದಯಾತ್ರೆ, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ಹಗಲುರಾತ್ರಿ ದುಡಿದವರು. ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ದಾವಣಗೆರೆಯ ಕಾಂಗ್ರೆಸ್ ಯುವ ನಾಯಕ ಸಾಥ್ ಕೊಟ್ಟಿದ್ದರು. ಅಧಿಕಾರಕ್ಕೆ ಬರುವ ಮುನ್ನ ಹಾಗೂ ಅಧಿಕಾರಕ್ಕೆ ಬಂದ ಬಳಿಕ ಈ ರಾಜ್ಯ ಮಾತ್ರವಲ್ಲ, ಕರ್ನಾಟಕ, ಎಐಸಿಸಿ ವರಿಷ್ಠರ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಎಲ್ಲರ ಮನಸ್ಸು ಗೆದ್ದಿರುವ ಯುವ ನಾಯಕ ಸೈಯದ್ ಖಾಲಿದ್ ಅಹ್ಮದ್. ದಾವಣಗೆರೆಯ ಕಾಂಗ್ರೆಸ್ ಹಿರಿಯ ನಾಯಕ ಸೈಯದ್ ಸೈಫುಲ್ಲಾ ಅವರ ಪುತ್ರ. ತಂದೆಯಂತೆ ರಾಜಕೀಯದಲ್ಲಿ ಮೊದಲು ಪಕ್ಷಕ್ಕೆ ದುಡಿಯಬೇಕು, ಆಮೇಲೆ ಸ್ಥಾನಮಾನ ಕೇಳಬೇಕು ಎಂಬುದು ಇವರ ತತ್ವ ಹಾಗಾಗಿ, ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾತ್ರವಲ್ಲ, ಎಲ್ಲಾ ನಾಯಕರ ಮನಗೆಲ್ಲುವ ಜೊತೆಗೆ ಬೆಳೆಯುತ್ತಿರುವ ಯುವ ನಾಯಕ.