ಬೆಂಗಳೂರು: ಶೋಕಾಸ್ ನೋಟಿಸ್‌ಗೆ ಉತ್ತರಿಸದೇ ತಿರಸ್ಕರಿಸಿದ್ದಕ್ಕೆ ಬಿಜೆಪಿ ಹೈಕಮಾಂಡ್ ಬಸವನಗೌಡ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.ಸ್ವಪಕ್ಷ ನಾಯಕತ್ವದ ಬಗ್ಗೆ ಶಿಸ್ತು ಮೀರಿ ಪದೇಪದೇ ಬಹಿರಂಗವಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಶಾಸಕ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಎರಡು ಬಾರಿ ನೋಟಿಸ್ ಕಳಿಸಿ ವಾರ್ನಿಂಗ್ ನೀಡಿತ್ತು. ಆದರೆ ಹೈಕಮಾಂಡ್ ನೋಟಿಸ್‌ಗೆ ಡೋನ್ಟ್ ಕೇರ್ ಅಂದಿದ್ದಕ್ಕೆ ರಾಷ್ಟ್ರೀಯ ಬಿಜೆಪಿ ಶಿಸ್ತು ಸಮಿತಿ ಬಸವನಗೌಡ ಪಾಟೀಲ್ ಯತ್ನಾಳ್‌ರನ್ನು ಆರು ವರ್ಷ ಪಕ್ಷದಿಂದ ಉಚ್ಛಾಟಿಸಿದೆ.