ಬೆಂಗಳೂರು, ಪ್ರಿಯತಮೆ ದೂರ ಆಗಿದಕ್ಕೆ ನೊಂದಿದ್ದ ಪ್ರಿಯಕರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ,ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಜರುಗಿದೆ.ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿಯಾಗಿದ್ದಾನೆ. ಈತ ಕಳೆದ ಎರಡು ವರ್ಷದಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಪಿಯುಸಿ ಓದುವಾಗ ಯುವತಿಯ ಪರಿಚಯವಾಗಿ ಲವ್ ಆಗಿತ್ತು. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು.
ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ. ಹಲವು ಬಾರಿ ಇಬ್ಬರು ಭೇಟಿಯಾಗಿ ಓಡಾಡಿದ್ರು. ಮೊನ್ನೆ ಮೊನ್ನೆ ನಮ್ಮ ಚಿಕ್ಕಪ್ಪ ಮದುವೆಗೆ ಒಪ್ಪುತ್ತಿಲ್ಲ. ನೀನು ಬೇರೆ ಹುಡುಗಿಯನ್ನ ಮದುವೆಯಾಗುವಂತೆ ಯುವತಿ ಹೇಳಿದ್ದಳೆನ್ನಲಾಗಿದೆ.ಲವರ್ ಯುವತಿ ದೂರವಾಗಿದಕ್ಕೆ ಮನನೊಂದಿದ್ದ ಚೇತನ್ ,ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ .
ಈ ವೇಳೆ ನೀನು ಸಿಗದಿದ್ರೆ, ಸಾಯುವುದಾಗಿ ಹೇಳಿದ್ದ ಎನ್ನಲಾಗಿದೆ. ನಂತರ ಕತ್ತರಿಯಿಂದ ಹೊಟ್ಟೆಗೆ ತಿವಿದುಕೊಂಡಿದ್ದ. ಬಳಿಕ ಚೇತನ್ ತಂದೆ ತಾಯಿಗೆ ಯುವತಿ ಕಡೆಯವರು ವಿಷಯ ತಿಳಿಸಿದ್ದರು.ಸ್ಥಳಕ್ಕೆ ಪೋಷಕರು ಬಂದು ನೋಡುವಾಗ ಚೇತನ್ ಆಟೋದಲ್ಲಿ ಅಸ್ತವ್ಯಸ್ತವಾಗಿ ಬಿದಿದ್ದು ಕಂಡು ಬಂದಿದೆ. ಬಳಿಕ ನಾಗರಬಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚೇತನ ಸಾವನ್ನಪ್ಪಿದ್ದಾನೆ. ಆದರೆ, ಚೇತನ್ ಕುಟುಂಬಸ್ಥರಿಂದ ಕೊಲೆ ಆರೋಪ ಕೇಳಿ ಬಂದಿದೆ. ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸದ್ಯ ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರೋ ನಂದಿನಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರೇಯಸಿ ಕೈಕೊಟ್ಟಿದ್ದಕ್ಕೆ ಮನನೊಂದಿದ್ದ ಯುವಕ ಸಾವು…
RELATED ARTICLES


