Wednesday, April 30, 2025
24 C
Bengaluru
LIVE
ಮನೆಆರೋಗ್ಯಪೋಷಕಾಂಶ ಹಾಗೂ ಖನಿಜಾಂಶಗಳ ಆಗರ ಎಳನೀರು:

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ ಎಳನೀರು:


Freedom tv desk : ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರಖಗಕ್ಕೂ ಮದ್ದಾಗಿದ್ದು , ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ, ಕಿಡ್ನಿಯಲ್ಲಿ ಕಲ್ಲು, ತಲೆನೋವುಗಳಂತಹ ನಾನಾ ರೋಗಗಳಿಗೆ ಎಳನೀರು ಪ್ರಮುಖ ಮದ್ದಾಗಿದೆ.

ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರಖಗಕ್ಕೂ ಮದ್ದಾಗಿದ್ದು , ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ, ಕಿಡ್ನಿಯಲ್ಲಿ ಕಲ್ಲು, ತಲೆನೋವುಗಳಂತಹ ನಾನಾ ರೋಗಗಳಿಗೆ ಎಳನೀರು ಪ್ರಮುಖ ಮದ್ದಾಗಿದೆ.

ವರ್ಷದ ಎಲ್ಲಾ ದಿನಗಳಲ್ಲೂ ಸಿಗುವ ಎಳನೀರಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ . ಪ್ರತೀನಿತ್ಯ ಒಂದೊಂದು ಎಳನೀರು ಕುಡಿಯುವ ಅಭ್ಯಾಸವಿಟ್ಟುಕೊಂಡರೆ, ದೇಹಕ್ಕೆ ಎದುರಾಗುವ ಸಾಕಷ್ಟು ರೋಗಗಳಿಂದ ದೂರವಿರಬೇಕು . ಸಿಹಿ ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಎಳನೀರಿನಿಂದ ಸಿಗುವ ಪೋಷಕಾಂಶಗಳಿಂದ ದೇಹಶೀಘ್ರ ತನ್ನ ಚಟುವಟಿಕೆಗಳನ್ನು ತೊಡೆದುಕೊಳ್ಳುತ್ತದೆ.

. ಅಜೀರ್ಣ ಮತ್ತು ಹೊಟ್ಟೆನೋವು ಸಂಬಂದಿತ ಸಮಸ್ಯೆಗಳಿಗೆ ಎಳನೀರು ಒಳ್ಳೆಯ ಅರೋಗ್ಯ ಪರಿಣಾಮ ನೀಡುತ್ತದೆ. ಪ್ರತಿದಿನ ಎಳನೀರು ಸೇವಿಸಿದರೆ ಅಜೀರ್ನ ಸಮಸ್ಯೆ ಮತ್ತು ಹೊಟ್ಟೆನೋವು ನಿವಾರಣೆಯಾಗುತ್ತದೆ.

. ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಮಧುಮೇಹ ರೋಗಲಕ್ಷಣಗಳನ್ನು ಸುಧಾರಿಸಳು ಸಹಾಯಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಮಾಡುತ್ತದೆ.

. ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ತಕ್ರಸಂಚಾರ ಹೆಚ್ಚುತ್ತದೆ. ಇದರ ಪರಿಣಾಮ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತದೆ.

. ಮುಖದ ಮೇಲೆ ಹೊಳಪನ್ನು ಕಾಪಾಡಿಕೊಳ್ಳಲು ಎಳನೀರು ಸಹಾಯ ಮಅಡುತ್ತದೆ. ನಿರ್ಜಲೀಕರಣವು ಚರ್ಮವನ್ನು ಹಾನಿಯುಂಟು ಮಾಡುತ್ತದೆ. ಜೊತೆಗೆ ನಿಮ್ಮ ಮುಖದಲ್ಲಿ ಮೊಡವೆ ಉಂಟಾಗಲು ಕಾರಣವಾಗುತ್ತದೆ. ಎಳನೀರು ದೇಹಕ್ಕೆ ತೇವಾಂಶವನ್ನು ನೀಡುವುದರಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯವಾಗಿದೆ.

. ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡಲು, ಮೂತ್ರನಾಳದ ಸೋಂಕಿನಿಂದ ನಿಮಗೆ ರಕ್ಷಣೆಯನ್ನು ನೀಡುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments