ಜನಸಾಮಾನ್ಯರ ದನಿ

ಪೋಡಿಮುಕ್ತ ಗ್ರಾಮಕ್ಕೆ ಸಂಕಲ್ಪ : ಸಚಿವ ಕೃಷ್ಣಬೈರೇಗೌಡ

ಕಳೆದ ನಾಲ್ಕು ವರ್ಷಗಳಿಂದ ನಿಂತಿರುವ ಪೋಡಿಮುಕ್ತ ಗ್ರಾಮ ಕಾರ್ಯಕ್ರಮಗಳನ್ನು ಮರುಅನುಷ್ಠಾನ ಮಾಡಲು ಸಂಕಲ್ಪ ಮಾಡಿದ್ದು, ಬಾಕಿ  ಇರುವ 14 ಸಾವಿರ ಗ್ರಾಮಗಳನ್ನು ಪೋಡಿಮುಕ್ತ ಮಾಡುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಸೋಮವಾರ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್​ನ ಡಾ.ಅಶ್ವಸ್ಥನಾರಾಯಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೋಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು 1,800 ಪರವಾನಗಿ ಸರ್ವೇಯರ್​​ಗಳಿಗೆ ತರಬೇತಿ ನೀಡಲಾಗುತ್ತಿದೆ. ಸದ್ಯದಲ್ಲೇ ಜಿಲ್ಲಾವಾರು ಅಗತ್ಯ ಆಧರಿಸಿ ಈ ಸರ್ವೇಯರ್​​ಗಳನ್ನು ಜಿಲ್ಲಾವಾರು ನಿಯೋಜನೆ ಮಾಡಲಾಗುವುದು. ಜತೆಗೆ, 364 ಸರ್ವೇಯರ್​ ಮತ್ತು 27 ಎಡಿಎಲ್​ಗಳನ್ನು ಇಲಾಖೆ ವತಿಯಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಪೋಡಿ ಪ್ರಕರಣಗಳಿಂದಾಗಿ ಜನರಿಗೆ ನೆಮ್ಮದಿ ಇಲ್ಲವಾಗಿದೆ. ವಿಶೇಷವಾಗಿ ರೈತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪೋಡಿ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ಎಲ್ಲ ಸಿದ್ಧತೆ ಮಾಡಲಾಗಿದೆ ಎಂದರು.

Comments (0)

Your email address will not be published. Required fields are marked *

Back to top button