ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹುಲಿ ಚಲನೆಯನ್ನು ಸೆರೆ ಹಿಡಿಯಲಾಗಿದೆ. ಕತ್ತಲ ರಸ್ತೆಯಲ್ಲಿ ತಡರಾತ್ರಿ ಹುಲಿ ಪ್ರತ್ಯಕ್ಷವಾಗಿದೆ. ನಾಲ್ಕೇರಿ-ಕುಟ್ಟ ಮಾರ್ಗದ ರಸ್ತೆಯಲ್ಲಿ ರೈತರ ತೋಟದಲ್ಲಿ ಪ್ರಯಾಣಿಕರಿಗೆ ಹುಲಿ ಕಾಣಿಸಿಕೊಂಡಿದೆ. ಹುಲಿರಾಯ ಕೆಲ ಹೊತ್ತು ರಸ್ತೆಯಲ್ಲಿ ಅಡ್ಡಾಡಿ ತೋಟದಲ್ಲಿ ಮರೆಯಾಗಿದೆ. ರಸ್ತೆ ಮೇಲೆ ಹುಲಿ ಕೂತು ಹಾಗೂ ಓಡಾಡಿದ ದೃಶ್ಯಗಳು ರಸ್ತೆಯಲ್ಲಿ ಬರುತ್ತಿದ್ದ ಕೆಲ ವಾಹನ ಚಾಲಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಹುಲಿರಾಯನನ್ನು ಹತ್ತಿರದಿಂದ ಕಂಡ ಜನ ಥ್ರಿಲ್ ಆಗಿದ್ದಾರೆ. ಕೆಲವರು ಭಯಪಟ್ಟಿಕೊಂಡಿದ್ದಾರೆ.ಅಲ್ಲದೇ ಗ್ರಾಮೀಣ ಭಾಗದ ಜನರು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದ ವ್ಯಾಘ್ರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿರುವ ಹಿನ್ನೆಲೆಯಲ್ಲಿ ಮನೆಯಿಂದ ಹೋರಹೋಗಲು ಹಾಗೂ ತೋಟಗಳತ್ತ ಕಾರ್ಮಿಕರು ಓಡಾಟ ನಡೆಸಲು ಹಿಂದೆಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.