ರಾಜಕೀಯ ಪಲ್ಲಟಗಳ ಕಾರಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಕೊಕ್ ಕೊಡಲು ಹೈಕಮಾಂಡ್ ಮುಂದಾಗಿದೆ.. ಅಂದ್ಕೊಂಡಂತೆ ಎಲ್ಲಾ ಆಗಿದ್ರೆ ಇಷ್ಟೊತ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗೆ ಇಳಿಯಬೇಕಾಗಿತ್ತು. ವಿಜಯೇಂದ್ರ ಜಾಗಕ್ಕೆ ಬೇರೊಬ್ಬರು ಬರಬೇಕಾಗಿತ್ತು. ಆದ್ರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ಈ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ
ಪಹಲ್ಗಾಮ್ ದಾಳಿ ಕಾರಣ ಗಡಿಯಲ್ಲಿ ಉದ್ವಿಗ್ನತೆ ನೆಲೆಸಿದೆ.. ಹೀಗಾಗಿ ಕೇಂದ್ರ ಸರ್ಕಾರ ಭದ್ರತೆ ಕಡೆಗೆ ಹೆಚ್ಚು ಗಮನ ಹರಿಸಿದೆ.. ಇದರ ಪರಿಣಾಮ ಪಕ್ಷದ ಎಲ್ಲಾ ಚಟುವಟಿಕೆಯನ್ನು ಬಿಜೆಪಿ ಹೈಕಮಾಂಡ್ ಸದ್ಯದ ಮಟ್ಟಿಗೆ ಪಕ್ಕಕ್ಕೆ ಇರಿಸಿದೆ.
ಪಕ್ಷದ ಸಂಘಟನಾತ್ಮಕ ಚುನಾವಣೆ ಮತ್ತು ಬದಲಾವಣೆಗಳಿಗೆ ಬಿಜೆಪಿ ತಾತ್ಕಾಲಿಕ ಬ್ರೇಕ್ ಹಾಕಿದೆ. ಹೀಗಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಸದ್ಯಕ್ಕೆ ಬಚಾವ್ ಆಗಿದ್ದಾರೆ. ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ವಿಜಯೇಂದ್ರ ಮಾಜಿ ಅಧ್ಯಕ್ಷ ಆಗಿ ಬಿಡ್ತಿದ್ರು. ರಾಜ್ಯ ಬಿಜೆಪಿಗೆ ವಿಜಯೇಂದ್ರ ಸ್ಥಾನದಲ್ಲಿ ಕೇಂದ್ರ ಸಚಿವ
ಸೋಮಣ್ಣನೋ? ಬೊಮ್ಮಾಯಿನೋ? ಅಥ್ವಾ ಇನ್ಯಾರೋ ಪ್ರೆಸಿಡೆಂಟ್ ಆಗಿರ್ತಿದ್ರು.
ಆದ್ರೆ, ಪಹಲ್ಗಾಮ್ ದಾಳಿ ಕಾರಣ ವಿಜಯೇಂದ್ರ ಸದ್ಯಕ್ಕೆ ಬಚಾವ್ ಆಗಿದ್ದಾರೆ