ರಾಜ್ಯ

ನ್ಯೂ ಇಯರ್​​​ ವೆಲ್​​​ಕಮ್​​ಗೆ ಪೊಲೀಸ್​​​​​ ಇಲಾಖೆ ಮೀಟಿಂಗ್​​​..!!

ಬಾರ್​​​ ರೆಸ್ಟೋರೆಂಟ್​ಗೆ ಕಠಿಣ ಮಾರ್ಗಸೂಚಿ..!!

ಬೆಂಗಳೂರು : ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸ್ ಇಲಾಖೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇನ್ನೂ 15 ದಿನ ಬಾಕಿ ಇರುವಾಗಲೇ ಇಂದು ಹಲವು ಇಲಾಖೆಗಳೊಂದಿಗೆ ಮೀಟಿಂಗ್ ಮಾಡಲಾಗುತ್ತಿದೆ. ಹೊಸವರ್ಷಾಚರಣೆಯ ಮಾರ್ಗಸೂಚಿ ತಯಾರಿಗಾಗಿ ವಿವಿಧ ಇಲಾಖೆಗಳ ಜೊತೆ ಇಂದು ಕಮಿಷನರ್ ಕಚೇರಿಯಲ್ಲಿ ಮಹತ್ವದ ಸಭೆ ನಡಸಲಾಗುತ್ತಿದೆ.

ಪೊಲೀಸ್​​ ಸಭೆಯಲ್ಲಿ ಯಾರೆಲ್ಲಾ ಭಾಗಿ ..!

ಪೊಲೀಸ್​​ ಕಮಿಷನರ್ ಬಿ. ದಯಾನಂದ್​​, ನಗರದ ಎಲ್ಲಾ ಡಿಸಿಪಿಗಳು ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ಜಂಟಿ ಆಯುಕ್ತರು ಭಾಗಿ. ಬಿಬಿಎಂಪಿ, ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಬೆಸ್ಕಾಂ ಇಲಾಖೆಯವರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಮಾರ್ಗಸೂಚಿ ಬಿಡುಗಡೆ ಸಾಧ್ಯತೆ..!

ಸಭೆ ಬಳಿಕ ಮಾರ್ಗಸೂಚಿಗಳ ಬಿಡುಗಡೆ ಮಾಡಲಿದ್ದು , ಈ ಬಾರಿಯ ಹೊಸ ವರ್ಷಾಚರಣೆ ಹೊಸ ಹೊಸ ಮಾರ್ಗ ಸೂಚಿಗಳನ್ನು ನೀಡಲಿದ್ದಾರೆ.ಇತ್ತೀಚೆಗೆ ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಗಳಲ್ಲಿ ಕಾರ್ಟೂನ್​​ಗಳ ಬಳಕೆ ಹೆಚ್ಚಾಗಿದ್ದು ಅದರ ಬ್ಯಾನ್​​ಗೆ ಚಿಂತನೆ ನಡೆಸಲಾಗ್ತಿದೆ.ಜೊತೆಗೆ ಇಡೀ ರಾತ್ರಿ ಪವರ್ ಕಟ್ ಆಗದ ರೀತಿ ಬೆಸ್ಕಾಂಗೆ ತಿಳಿಸಲಾಗುತ್ತೆ. ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಕಠಿಣ ಮಾರ್ಗಸೂಚಿ ನೀಡಲು ನಿರ್ಧಾರಿಸಲಾಗುತ್ತೆ. ..ಕಪಲ್ಸ್ ಗಳಿಗೆ ಪ್ರತ್ಯೇಕ ಮಾರ್ಗ ರಚಿಸೋ ಪ್ಲ್ಯಾನ್​​ ತಯಾರಿ ಸೇರಿ ಹಲವು ಕಠಿಣ ಕ್ರಮ ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಳ್ಳೊ ಸಾಧ್ಯತೆ ಹೆಚ್ಚಾಗಿದೆ.

Comments (0)

Your email address will not be published. Required fields are marked *

Back to top button