ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬುಧವಾರ ಸಂಜೆ ಗಣಪತಿ ಮೂರ್ತಿ ಮೆರವಣಿಗೆ ವೇಳೆ ವಿವಿಧ ಸಮುದಾಯಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯ ಸುದ್ದಿ ಕೇಳಿ ರಾಜ್ಯ ಬಿಜೆಪಿ ನಾಯಕರು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಸಿ.ಟಿ ರವಿ ರಾಜ್ಯ ಸರ್ಕಾರ ವಿರುದ್ದ ಆಕ್ರೊಶವನ್ನು ವ್ಯಕ್ತಪಡಿಸಿದ್ದಾರೆ. ಆಡಳಿತಕ್ಕೆ ಬಂದ ಮೇಲೆ ರಾಜ್ಯದಾದ್ಯಂತ ಮತಾಂಧರ ಅಟ್ಟಹಾಸ ಮಿತಿಮೀರಿದೆ. ಮತಾಂಧತೆಯ ಗುಮ್ಮ ಅವರ ನೆತ್ತಿಗೆ ಏರಿ ಹಿಂದೂಗಳು ಪ್ರತಿನಿತ್ಯ ನೋವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ವಿಘ್ನ ವಿನಾಶಕನ ಮೂರ್ತಿಯ ಮೇಲೆ ಕಲ್ಲು ತೂರಾಟ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಮಚ್ಚು-ಲಾಂಗ್ ಹಿಡಿದುಕೊಂಡು ವಿನಾಯಕನ ಗಣೇಶನ ಮೇಲೆ ಕಲ್ಲು ತೂರಾಟ ನಡೆಸಿದ ಪುಂಡರ ಆಟಾಟೋಪಕ್ಕೆ ಹಲವರು ಗಾಯಾಳುಗಳಾಗಿದ್ದಾರೆ. ಇದಕ್ಕೆಲ್ಲ ಮದ್ದು ಅರೆಯಬೇಕಾದರೆ ರಾಜ್ಯದಲ್ಲೂ ಉತ್ತರಪ್ರದೇಶದ ಮಾದರಿಯ ಸರ್ಕಾರ ರಚನೆಯಾಗುವುದು ಇಂದಿನ ತುರ್ತು ಅಗತ್ಯ ಎಂದು ಆಗ್ರಹಿಸಿದ್ದಾರೆ.