ಕೊಪ್ಪಳ : ನಾನು ಶ್ರೀರಾಮುಲುಗೆ ಟಿಕೆಟ್ ನೀಡಲು ವಿರೋಧ ಅನ್ನೋದು ಸುಳ್ಳು. ನಾನು ಬಿಜೆಪಿ ರಾಜ್ಯಾದ್ಯಕ್ಷನು ಅಲ್ಲಾ, ಆ ಪಕ್ಷದ ಕೋರ್ ಕಮಿಟಿಯಲ್ಲಿ ಕೂಡಾ ಇಲ್ಲ. ಬಿಜೆಪಿಯು ಮಿತ್ರಪಕ್ಷದಲ್ಲಿಯೂ ಇಲ್ಲ. ಈ ವಿಷಯದಲ್ಲಿ ನನ್ನ ವಿಲನ್ ಮಾಡುವುದು ಸರಿಯಲ್ಲ ಎಂದು ಗಂಗಾವತಿ ಶಾಸಕ ಹೇಳಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಯಲ್ಲಿ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರ್ತೇವೆ ಅಂತಾ ಜವಾಬ್ದಾರಿ ತೆಗೆದುಕೊಂಡು ಬಂದವರಿಗೆ ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲುತ್ತಾರೆ ಎನ್ನುವ ಸರ್ವೇ ರಿಪೋರ್ಟ್ ಬಂದಿದೆ. ಹೀಗಾಗಿ ಶ್ರೀರಾಮುಲುಗೆ ಟಿಕೆಟ್ ನೀಡಬಾರದು ಅನ್ನೋ ಲೆಕ್ಕಾಚಾರ ಇರಬಹುದು.ವಿಧಾನಸಭೆ ಚುನಾವಣೆಯಲ್ಲಿ ಕೂಡಾ ಎಲ್ಲಾ ಸರ್ವೆಗಳಲ್ಲಿ ಕೂಡಾ ಶ್ರೀರಾಮುಲು ಸೋಲ್ತಾರೆ ಅಂತ ಬಂದಿತ್ತು.ಶ್ರೀರಾಮುಲು ಸೋತರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತೆ ಅಂತ ಜವಾಬ್ದಾರಿ ತೆಗೆದುಕೊಂಡವರಿಗೆ ಆಂತಕ ಇದೆ. ನಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಅನ್ನೋ ಭಯವಿದೆ. ಇದಲ್ಲದೇ ದೆಹಲಿಯಲ್ಲಿ ಇನ್ನೋಂದು ವರ್ಗವಿದೆ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡವರಿಗೆ ವಿರೋಧ ಮಾಡುವ ಬಣವೂ ಇದೆ.ಗೆದ್ದರೇ ನಮ್ಮ ಅಭ್ಯರ್ಥಿ ಗೆಲ್ಲುತ್ತಾನೆ. ಸೋತರೆ ರಾಜ್ಯದಲ್ಲಿ ಜವಾಬ್ದಾರಿ ತೆಗೆದುಕೊಂಡವರ ಮೇಲೆ ಟೆಂಗಿನ ಕಾಯಿ ಒಡೆದಂತಾಗುತ್ತದೆ ಅಂತ ಕೂತಿದ್ದಾರೆಇಬ್ಬರ ಜಗಳ ತಂದು ನನ್ನ ತಲೆಗೆ ಕಟ್ಟೋದು ಸರಿಯಲ್ಲ ಎಂದು ಜನಾರ್ಧನರೆಡ್ಡಿ ತಿಳಿಸಿದರು.ಪರೋಕ್ಷವಾಗಿ ಸಂತೋಷ ಬಣ ಮತ್ತು ವಿಜಯೇಂದ್ರ ಬಣದ ನಡುವಿನ ಗುದ್ದಾಟ ಪ್ರಸ್ತಾಪಿಸಿದ ರೆಡ್ಡಿ,ಬಿಜೆಪಿಗೂ ಜನಾರ್ದನ ರೆಡ್ಡಿಗೂ ಏನು ಸಂಬಂಧ..?ನಾನು ಬಿಜೆಪಿ ಜೊತೆ ಮೈತ್ರಿಗೆ ನಾಲ್ಕು ಸ್ಥಾನ ಕೇಳಿದ್ದೇನೆ ಅಂತ ಅಪಪ್ರಚಾರ ಮಾಡ್ತಿದ್ದಾರೆ.ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಗೆ ಸೆಳೆಯಲು ಈ ರೀತಿ ಅಪಪ್ರಚಾರ ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರೋರರನ್ನ ತಡೆಯಲು ಈ ರೀತಿ ಮಾಡ್ತಿದ್ದಾರೆ. ಕೆಲ ಬಿಜೆಪಿ ನಾಯಕರು ಹೀಗೆ ಮಾಡ್ತಿದ್ದಾರೆ.ಅನವಶ್ಯವಾಗಿ ನನ್ನ ಹೆಸರು ಎಳೆದು ತರಬಾರದು ಎಂದು ಅವರು ಎಚ್ಚರಿಸಿದರು.ಅವರವರ ಸ್ವಾರ್ಥಕ್ಕೆ ಇನ್ನೊಬ್ಬ ರನ್ನು ವಿಲನ್ ಮಾಡೋದನ್ನು ಬಿಡಬೇಕು.ಇನ್ನೊಬ್ಬ ರನ್ನು ವಿಲನ್ ಮಾಡೋದನ್ನು ಬಿಡಬೇಕು ಎಂದು ಹೇಳಿದರು.
ನನ್ನ ವಿಲನ್ ಮಾಡುವುದು ಸರಿಯಲ್ಲ,ಜನಾರ್ಧನರೆಡ್ಡಿ
RELATED ARTICLES