ಹೊಸದಿಲ್ಲಿ: ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸುತ್ತಿದ್ದ ಆರೋಪ ಹೊತ್ತ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಸುಖೀರ್ ಬಲ್ಬರ್ ಸಿಂಗ್‌ನನ್ನು ನವೀ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರೊಂದಿಗೆ ಕಾರ್ಯನಿರ್ವಹಿಸುವ ಮಹಿಳೆಯೊಬ್ಬಳಿಂದ ಹನಿ ಟ್ರ್ಯಾಪ್ ಮಾಡಿಸಿ ಪಾಣಿಪತ್‌ನ ಹೊಟೇಲ್ ಒಂದಕ್ಕೆ ಸುಖೀರ್. ಬಲ್ಬರ್‌ನನ್ನು ಕರೆಸಿದ ಪೊಲೀಸರು ಬುಧವಾರ ರಾತ್ರಿ ಅಲ್ಲಿ ಆತನನ್ನು ಬಂಧಿಸಿದ್ದಾರೆ. ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಈತನನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.ಹನಿಟ್ರ್ಯಾಪ್ ನಡೆದಿದ್ದು ಹೇಗೆ?: ಪೊಲೀಸರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಬಹಳ ದಿನಗಳ ಹಿಂದೆಯೇ ಸುಖೀರ್ ಬಲ್ಬರ್‌ನನ್ನು ಸಂಪರ್ಕಿಸಿ ಆತನ ಸ್ನೇಹ ಸಂಪಾದಿಸಿದ್ದರು. ಬುಧವಾರ ರಾತ್ರಿ ಆತನಿಗೆ ಕರೆ ಮಾಡಿದ ಮಹಿಳೆ, “ನಾನು ಪಾಣಿಪತ್‌ನ ಅಭಿನಂದನ್ ಹೊಟೇಲ್‌ನಲ್ಲಿದ್ದೇನೆ. ಬಹಳ ಕುಡಿದಿದ್ದೇನೆ. ಇಲ್ಲಿಗೆ ಬನ್ನಿ’ ಎಂದು ಹೇಳಿದ್ದಾರೆ. ಮೊದಲಿಗೆ ಇದು ಸಂಚು ಎಂದು ಅನುಮಾನಿಸಿದ ಸುಖೀರ್ ಬಲ್ಬರ್‌ನನ್ನು ಮಹಿಳೆಯು ಭರವಸೆ ನೀಡಿ ನಂಬಿಸಿ ಆತನನ್ನು ಕರೆಸಿಕೊಂಡಿದ್ದಾರೆ. ಅದೇ ಹೊಟೇಲ್‌ನಲ್ಲಿ ಸುಖೀರ್ ಬಲೀರ್‌ಗಾಗಿ ಕಾದಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.