ದಿನನಿತ್ಯ ಟೀ ಕುಡಿಯುವ ಅಭ್ಯಾಸವಿದ್ರೆ ಮೊದಲು ಗಮನದಲ್ಲಿಟ್ಟುಕೊಳ್ಳಿ… ಕಿಡ್ನಿ ಕಲ್ಲುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅದರ ಸೂಚನೆಗಳನ್ನು ತಿಳಿದುಕೊಳ್ಳಿ. ಆಗಾಗ ಬರುವ ಹೊಟ್ಟೆ ನೋವು , ಪಕ್ಕೆ ನೋವು ಕಿಡ್ನಿಯಲ್ಲಿ ಕಲ್ಲುಗಳು ಇವೆ ಡಂದು ಅರ್ಥ. ಯಾವುದೇ ವ್ಯಕ್ತಿಗೆ ಯಾವುದೇ ಸಮಯದಲ್ಲಿ ಕಿಡ್ನಿಯಲ್ಲಿ ಉಂಟಾಗಬಹುದು, ಕಿಡ್ನಿ ಕಲ್ಲುಗಳು ಉಂಟಾಗಲು ಕಾರಣಗಳನ್ನು ನೋಡುವುದಾದರೆ ಆಹಾರದಲ್ಲಿ ಕಂಡುಬರುವ ಕ್ಯಾಲ್ಸಿಯಂ , ಫಾಸ್ಫರಸ್ , ಆಕ್ಸಲೆಟ್ ಇತ್ಯಾದಿ ಅಂಶಗಳು ದಿನ ಕಳೆದಂತೆ ಕ್ರಮೇಣವಾಗಿ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವಂತೆ ಮಾಡುತ್ತವೆ. ಕಿಡ್ನಿಯಲ್ಲಿ ಕಲ್ಲುಗಳ ಉತ್ವತ್ತಿ ದೇಹದ ನಿರ್ಜಲೀಕರಣದಿಂದ ಕೂಡ ಆಗುತ್ತದೆ.
ಆಹಾರದಲ್ಲಿ ಸೋಡಿಯಂ ಪ್ರಮಾಣ ಜಾಸ್ತಿ ಆಉತ್ತಿದ್ದಂತೆ , ಹೈಪರ್ ಥೈರಾಯ್ಡ್ ಸಮಸ್ಯೆ ಇದ್ದೆ , ಮೂತ್ರನಾಳದ ಒಂದರೆ ಇದ್ದರೆ , ಮೂತ್ರನಾಳದ ತೊಂದರೆ , ಈ ರೀತಿ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ. ಸರಿಯಾಗಿ ನೀರು ಕುಡಿದೆಹೋದರೆ ಸಣ್ಣ ಸಣ್ಣ ಕಲ್ಲುಗಳು ಒಂದಕ್ಕೊಂದು ಅಂಟಿಕೊಂಡು ಕಿಡ್ನಿಯಲ್ಲಿ ದೊಡ್ಡದಾಗುತ್ತವೆ. ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ , ಹೆಚ್ಚು ನೀರು ಕುಡಿಯುವುದು ಮತ್ತು ಸಂಬಂಧಪಟ್ಟ ಒಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಕಿಡ್ನಿ ಕಲ್ಲುಗಳ ಸಮಸ್ಯೆಗಳಿಂದ ಪಾರಾಗಬಹುದು.
ನಿಮ್ಮ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗದೇ ಇರಲು ನೀವು ಮಅಡಬೇಕಾದ ಕೆಲಸ ಎಂದರೆ ಹೆಚ್ಚಾಗಿ ನೀರು ಕುಡಿಯುವುದು. ಇದು ನಿಮ್ಮ ಮೂತ್ರವನ್ನು ಡೈಲ್ಯೂಟ್ ಮಾಡುತ್ತದೆ ಮತ್ತು ಸಮತೋಲನದ ಆಹಾರ ಪದ್ಧತಿಯಿಂದ ಅಂದರೆ ನಿಮ್ಮ ಆಹಾರದಲ್ಲಿ ಸೋಡಿಯಂ ಮತ್ತು ಆಕ್ಸಲೆಟ್ ಕಡಿಮೆ ಇದ್ದು ಕ್ಯಾಲ್ಸಿಯಂ ಪ್ರಮಾಣ ಇರುವ ಆಹಾರಗಳನ್ನು ಸೇವಿಸಬೇಕು.
ಮೂತ್ರನಾಳದ ಮೂಲಕ ಕಿಡ್ನಿ ಕಲ್ಲುಗಳು ಹೋಗಲು ಪ್ರಯತ್ನಿಸಿದಾಗ ವಿಪರೀತ ನೋವು ಉಂಟಾಗುತ್ತದೆ. ಇದು ಸಾಮನ್ಯವಾಗಿ ಸೊಂಟದ ಭಾಗ ಅಥವಾ ಅಕ್ಕ ಪಕ್ಕ , ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸುವಂತೆ ಮಾಡುತ್ತದೆ. ಇದರ ಜೊತೆಗೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ಕಡಿಮೆ ಮೂತ್ರ ವಿಸರ್ಜನೆ ಮಾಡುವುದು, ಮೂತ್ರದಲ್ಲಿ ರಕ್ತ ಕಾಣಿಸುವುದು , ವಾಕರಿಕೆ , ವಾಂತಿ ಸಮಸ್ಯೆ ಕಂಡುಬರುವುದು ಕಾಣಿಸುತ್ತದೆ. ಒಂದು ವೇಳೆ ಮೂತ್ರನಾಳದಲ್ಲಿ ಕಲ್ಲು ಸಿಲುಕಿಕೊಂಡರೆ , ಅದು ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ಜ್ವರ ಚಳಿ ಕೂಡ ಕಾಣಿಸುತ್ತದೆ. ಈ ಎಲ್ಲಾ ಸಮಸ್ಯೆಗಳ ಜೊತೆಗೆ ನೀವು ಇದ್ದರೆ ತಕ್ಷಣವೇ ಡಾಕ್ಟರ್ ಬಳಿ ತೋರಿಸಿಕೊಳ್ಳುವುದು ಒಳ್ಳೆಯದು.