ದಾವೂದ್ ಇಬ್ರಾಹಿಂ ಆಸ್ಪತ್ರೆ ದಾಖಲು ವಿಷಪ್ರಾಶನ ಶಂಕೆ…!

ಬೆಂಗಳೂರು : 1993 ಮುಂಬೈ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂಗೆ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಕರಾಚಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಶಂಕೆ
ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈತನಿಗೆ ವಿಷಪ್ರಾಷನ ಮಾಡಿದ್ದಾರೆ ಅನ್ನೋ ಮಾಹಿತಿಗಳಿಗೆ ಹರಿದಾಡತೊಡಗಿತ್ತು. ಆದರೆ ಈವರೆಗೂ ದಾವೂದ್ ಅನಾರೋಗ್ಯ ಸ್ಥಿತಿಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
ಕರಾಚಿಯ ಖಾಸಗಿ ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್.!
ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾದ ಬಳಿಕ ಆಸ್ಪತ್ರೆಯ ಹೊರಗೂ ಮತ್ತು ಒಳಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನೂ ಇಡೀ ಮಹಡಿಯಲ್ಲಿ ದಾವೂದ್ ಒಬ್ಬನೇ ಇದ್ದು ಆಸ್ಪತ್ರೆಯ ಉನ್ನತ ಅಧಿಕಾರಿಗಳು ಹಾಗೂ ಆತನ ಕುಟುಂಸ್ಥರು, ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ದಾವೂದ್ ಆಸ್ತತ್ರೆಗೆ ಸೇರಿರುವ ಬಗ್ಗೆ ಆತನ ಸಂಬಂಧಿಕರಾದ ಆಲಿಷಾ ಪರ್ಕರ್, ಸಜಿದ್ ವಾಗ್ಲೆರವರಿಂದ ಮುಂಬೈ ಪೊಲೀಸರು ಮಾಹಿತಿ ಸಂಗ್ರಹಿಸಿತ್ತಿದ್ದಾರೆ.




