ತುಮಕೂರಿನಲ್ಲಿ ಮೀಟರ್ ಬಡ್ಡಿ ದಂದೆಗೆ ಮತ್ತೊಂದು ಬಲಿ


ತುಮಕೂರಿನಲ್ಲಿ ಮೀಟರ್ ಬಡ್ಡಿ ದಂದೆಗೆ ಮತ್ತೊಂದು ಬಲಿ, ಇದರಿಂದ ತುಮಕೂರು ಜಿಲ್ಲೆಯಲ್ಲಿ ಭಯದ ವಾತಾವರಣ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೇಯೇ, ಕಳೆದ ಕೆಲ ದಿನಗಳಹಿಂದೆ ಮೀಟರ್ ಬಡ್ಡಿ ದಂದೆಯಿಂದ ಆತ್ಮಹತ್ಯೆ ಮಾಡಿಕೊಂಡ ಬೇಕರಿ ಮಾಲೀಕ. ಈ ಪ್ರಕರಣ ಮಾಸುವ ಮುನ್ನವೇ ನಿಟ್ಟೂರಿನಲ್ಲಿ ರಾಮಸ್ವಾಮಿ 45 ವರ್ಷ ಎಂಬುವರು ಮೀಟರ್ ಬಡ್ಡಿ ದಂದೆಯಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ನಡೆದ ಘಟನೆ, ಬಡ ರಾಮಸ್ವಾಮಿ ಸಲೂನ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ , ರಾಮಸ್ವಾಮಿ ಗ್ರಾಮದ ಯೋಗೀಶ್ ಎಂಬುವರ ಬಳಿ ಸಾಲ ಪಡೆದಿದ್ದ. ಸುಮಾರು ಮೂರು ವರ್ಷಗಳ ಕಾಲ ಶೇ10ರಂತೆ ಬಡ್ಡಿಯನ್ನು ಕಟ್ಟಿದ್ದರು.ಇನ್ನೂ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ್ದರಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.ಹಣಕ್ಕಾಗಿ ಒತ್ತಡ ಹೆಚ್ಚಿದ್ದರಿಂದ ಬಡ್ಡಿ ಹಣವನ್ನು ಕಟ್ಟಲಾಗದೆ, ವ್ಯವಹಾರವನ್ನೂ ಸರಿಯಾಗಿ ನಡೆಸಲಾಗಿಲ್ಲ.ಮನನೊಂದಿದ್ದ ರಾಮಸ್ವಾಮಿ,ಮಂಗಳವಾರ ಮಧ್ಯಾಹ್ನ ಮನೆಗೆ ಬಂದು ಕೊಠಡಿಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.ತಕ್ಷಣವೇ ಸಂಬಂಧಿಸಿದೆ ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




