Saturday, September 13, 2025
23 C
Bengaluru
Google search engine
LIVE
ಮನೆರಾಜಕೀಯಡಿ.ಕೆ ಸಿಎಂ ಕನಸಿಗೆ ಪರಮೇಶ್ವರ್ ಟಾಂಗ್..! ಗೃಹಸಚಿವ ಹೇಳಿದ್ದೇನು?

ಡಿ.ಕೆ ಸಿಎಂ ಕನಸಿಗೆ ಪರಮೇಶ್ವರ್ ಟಾಂಗ್..! ಗೃಹಸಚಿವ ಹೇಳಿದ್ದೇನು?

ಡಿಸಿಎಂ ಡಿ.ಕೆ.ಶಿವಕುಮಾರ್​​ ಸಿಎಂ ಆಗುವ ಕನಸಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಟಾಂಗ್ ನೀಡಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಪರಮೇಶ್ವರ್, ಮುಖ್ಯಮಂತ್ರಿಗಳು (ಸಿದ್ದರಾಮಯ್ಯ) ದೀರ್ಘಾವಧಿ ಸಿಎಂ ಆಗಲೆಂದು ನಾನು ಹಾರೈಸುತ್ತೇನೆ. ದಾಖಲೆ ಮಾಡಲಿ ಅಂತ ನಾನು ಬಯಸುತ್ತೇನೆ ಅಂತ ಹೇಳಿದ್ದಾರೆ.

ಜಿ. ಪರಮೇಶ್ವರ್ ಹೇಳಿದ್ದೇನು?

ನಾನು ಕೂಡ ಮೊನ್ನೆ ಹೇಳಿಕೆ ಕೊಟ್ಟಿದ್ದೇನೆ. ಚುನಾವಣೆ ಮುಗಿದ ಬಳಿಕ ಶಾಸಕರು ಸಿಎಲ್​ಪಿ ಲೀಡರ್​ ಅನ್ನು ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ನಾಯಕರನ್ನಾಗಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಎರಡೂವರೆ ವರ್ಷಕ್ಕೆ ಮಾತ್ರ ಆಯ್ಕೆ ಮಾಡಿಕೊಳ್ಳಿ. ಮತ್ತೆ ಎರಡೂವರೆ ವರ್ಷಕ್ಕೆ ಬದಲಾಯಿಸುತ್ತೇವೆ ಎಂದು ಹೇಳಿಲ್ಲ. ನಾವು ಅಂದುಕೊಂಡಿದ್ದು ಐದು ವರ್ಷಕ್ಕೆ ಅಂತಾ.
ಹಾಗಾಗಿ ನಮ್ಮ ಮನಸ್ಸಿನಲ್ಲಿ ಅದನ್ನೇ ಇಟ್ಟುಕೊಂಡಿದ್ದೇವೆ. ಅದೇ ರೀತಿ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಲೆಂದು ನಾನು ಹಾರೈಸುತ್ತೇನೆ.
ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗಲಿದೆ ಎಂದಿದ್ದಾರೆ. ಪರಮೇಶ್ವರ್ ಅವರ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಪರ ಇರುವ ಶಾಸಕರೂ ಕೂಡ ಸಿದ್ದು ಪರ ಹೇಳಿಕೆ ನೀಡುತ್ತಿದ್ದು ಸಹಜವಾಗಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಕನಸಿಗೆ ನೀರೆರೆದಂತಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments