ನಟ ಡಾಲಿ ಧನಂಜಯ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಡಾಲಿ ಮದುವೆ ಶಾಸ್ತ್ರಗಳು ಭರದಿಂದ ಸಾಗಿವೆ. ಅದರ ಭಾಗವಾಗಿ ಡಾಲಿ ಧನಂಜಯ ಅವರು ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ.
ಡಾಲಿ ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅರಸಿಕೆರೆಯ ಪ್ರಸಿದ್ಧ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡವನ್ನು ಡಾಲಿ ಧನಂಜಯ ತುಳಿದಿದ್ದಾರೆ. ಶರ್ಟ್, ಪಂಚೆ ಧರಿಸಿದ್ದ ಧನಂಜಯ ಅವರು ಬೆಂಕಿಯ ಕೆಂಡಗಳಲ್ಲಿ ಬರಿಗಾಲಿನಲ್ಲೇ ಓಡಿದ್ದಾರೆ. ಈ ವೇಳೆ ಸಾಕಷ್ಟು ಜನರು ಧನಂಜಯ ಅವರ ಕೆಂಡ ಹಾಯುವಿಕೆಯನ್ನು ಕುತೂಹಲದಿಂದ ನೋಡುತ್ತಿದ್ದರು.
ಕೊಂಡ ತುಳಿದ ನಂತರ ಜೇನುಕಲ್ಲು ಸಿದ್ದೇಶ್ವರ ದೇವರ ದರ್ಶನ ಪಡೆದುಕೊಂಡ ಅವರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದಾದ ಮೇಲೆ ಮನೆಯಲ್ಲಿ ಮನೆ ದೇವರ ಪೂಜೆಯನ್ನು ನೆರವೇರಿಸಿದರು. ಇದೇ ಶನಿವಾರ ಹಾಗೂ ಭಾನುವಾರ ಅಂದರೆ ಫೆ. 15, 16 ರಂದು ಮೈಸೂರಿನಲ್ಲಿ ಡಾಲಿ ಹಾಗೂ ಧನ್ಯತಾ ಅವರು ವಿವಾಹವಾಗಲಿದ್ದಾರೆ. ಏತನ್ಮಧೆ ಸ್ವತಃ ಡಾಲಿ ಧನಂಜಯ ಮತ್ತವರ ಭಾವಿ ಪತ್ನಿ ಜೊತೆ ಅನೇಕ ಗಣ್ಯರಿಗೆ ತಮ್ಮ ಮದುವೆಗೆ ಬರುವಂತೆ ಆಮಂತ್ರಣ ನೀಡಿದ್ದಾರೆ