ಗ್ರೀನ್ ಎಗ್ ಮಸಾಲಾ ಮಾಡುವ ವಿಧಾನ

 ಬೇಕಾಗುವ ಪದಾರ್ತಗಳು…

. ಮೊಟ್ಟೆ -4[ಬೇಯಿಸಿದ್ದು]

.ಶುಂಠಿ – ಸ್ವಲ್ಪ

. ಬೆಳ್ಳುಳ್ಳಿ-ಸ್ವಲ್ಪ

.ಗೋಡಂಬಿ -10

.ಹಸಿಮೆಣಸಿನಕಾಯಿ -4

. ಮೊಸರು -5 ಚಮಚ

.ಪುದೀನಾ -ಸ್ವಲ್ಪ

. ಕೊತ್ತಂಬರಿ -ಸ್ವಲ್ಪ

.ಎಣ್ಣೆ- ಸ್ವಲ್ಪ

. ಜೀರಿಗೆ -ಅರ್ಧ ಚಮಚ

. ಕರಿಬೇವು -ಸ್ವಲ್ಪ

. ಈರುಳ್ಲಿ -1

. ದನಿಯಾ ಪುಡಿ -1 ಚಮಚ

. ಅಚ್ಚಖಾರದ ಪುಡಿ – ಅರ್ಧ ಚಮಚ

. ಅರಿಶಿಣದ ಪುಡಿ – ಸ್ವಲ್ಪ

. ಚಕ್ಕೆ/ಲವಂಗ ಪುಡಿ ಅಥವಾ ಗರಂ ಮಸಾಲಾ ಪುಡಿ – ಅರ್ಧ ಚಮಚ

. ಕಾಳು ಮೆಣಸಿನ ಪುಡಿ – ಅರ್ಧ ಚಮಚ

. ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ..

.ಮೊದಲಿಗೆ ಮಿಕ್ಸಿ ಜಾರ್​ಗೆ ಶುಂಠಿ,ಬೆಳ್ಳುಳ್ಳಿ, ಗೋಡಂಬಿ,ಹಸಿಮೆಣಸಿನ ಕಾಯಿ, ಮೊಸರು, ಪುದೀನಾ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಕಾದ ನಂತರ ಜೀರಿಗೆ,ಕರಿಬೇವು ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದೀಗ ರುಬ್ಬಿದ ಮಿಶ್ರಣವನ್ನು ಹಾಕಿ 10 ನಿಮಿಷ ಕೈಯಾಡಿಸಿ. ಇದೀಗ ದನಿಯಾ ಪುಡಿ, ಅಚ್ಚ ಖಾರದ ಪುಡಿ, ಅರಿಶಿಣ ಪುಡಿ, ಚಕ್ಕೆ/ಲವಂಗ ಪುಡಿ ಅಥವಾ ಗರಂ ಮಸಾಲಾ ಪುಡಿ, ಕಾಳು ಮೇಣಸಿನ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ.

. ಮಸಾಲೆ ಎಣ್ಣೆ ಬಿಟ್ಟಕೊಳ್ಳುವವರೆಗೆ ಕೈಯಾಡಿಸುತ್ತಿರಿ. ಇದೀಗ ಮೊಟ್ಟೆಯನ್ನು ವೃತ್ತಕಾರದಲ್ಲಿ ಕತ್ತರಿಸಿಕೊಂಡು. ಇದನ್ನು ಮಸಾಲೆಗೆ ಸೇರಿಸಿ ಮಿಶ್ರಣ ಮಾಡಿ. 3 -ನಿಮಿಷ ಮಸಾಲೆಯೊಂದಿಗೆ ಕುಡಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಎಗ್ ಮಸಾಲೆ ಸವಿಯಲು ಸಿದ್ದ.

By admin

Leave a Reply

Your email address will not be published. Required fields are marked *

Verified by MonsterInsights